Posts

Showing posts from October, 2026

ನರಭಕ್ಷಕರ ಫಿಜಿ ದ್ವೀಪ.

     ಫಿಜಿಯನ್ನರು ಮೂಲತಃ ವಿರಾಮಜೀವಿಗಳು. ದುಡ್ಡು ಸಂಪಾದನೆ ಮಾಡಲು ಕೆಲಸ ಮಾಡುವುದರ ಕಲ್ಪನೆಯೇ ಅವರಿಗಿಲ್ಲ. ಅನ್ನಾಹಾರಗಳು ಅನಾಯಾಸವಾಗಿ ದೊರೆಯುವ ದ್ವೀಪದಲ್ಲಿ ಮನಬಂದಂತೆ ಕಾಲಕಳೆಯುತ್ತಾ ಇದ್ದವರು, ಬ್ರಿಟಿಷರು ಬಂದು ಆ ದ್ವೀಪವನ್ನು ಅಭಿವೃದ್ಧಿಪಡಿಸಲು ಯತ್ನಿಸಿ ಅಲ್ಲೆಲ್ಲಾ ಕಬ್ಬಿನ ತೋಟಗಳನ್ನು ಪ್ರಾರಂಭಿಸಿ, ಸಂಬಳಕ್ಕೆ ಕೆಲಸಕ್ಕೆ ಬರಬೇಕೆಂದು ಹೇಳಿದ ಕೂಡಲೇ ಅವರಿಗೆ ಆಶ್ಚರ್ಯವಾಯ್ತು. ಸಂಬಳವೂ ಬೇಡ ಕೆಲಸವೂ ಬೇಡ ಎಂದು ಅವರಪಾಡಿಗೆ ಅವರು ಆರಾಮಾಗಿ ಇದ್ದರು. ಬ್ರಿಟಿಷ್ ಕಂಪನಿಗಳ ಯಾವ ಪ್ರಲೋಭನೆಯಿಂದಲೂ ಅವರನ್ನು ಕೆಲಸ ಮಾಡುವಂತೆ ಪ್ರೇರಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಬ್ರಿಟಿಷರು ಅನಿವಾರ್ಯವಾಗಿ ವಿದೇಶಗಳಿಂದ ಕೆಲಸಗಾರರನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯ್ತು.      ಆಗ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ೧೮೭೪ರಲ್ಲಿ ಲಾರ್ಡ್ ಸ್ಯಾಲಿಸ್‌ಬರಿ ಫಿಜಿಯ ಕಬ್ಬಿನ ತೋಟಗಳಲ್ಲಿ ಕೆಲಸ ಮಾಡಲು ಮುಂದೆ ಬರುವ ಭಾರತೀಯರಿಗೆ ಅವರು ಅಲ್ಲಿರುವವರೆಗೂ ತಾತ್ಕಾಲಿಕ ಪೌರತ್ವ ಕೊಡುವುದಾಗಿ ಆಶ್ವಾಸನೆ ಕೊಟ್ಟು ಕೆಲಸಕ್ಕೆ ಬರುವವರೆಲ್ಲ ಬರಬಹುದೆಂದು ಆಹ್ವಾನಿಸಿದ. ಸಾವಿರಾರು ಜನ ಭಾರತೀಯರು ಅಲ್ಲಿಗೆ ಜೀವನೋಪಾಯಕ್ಕೆ ಹೋಗಲು ಮುಂದೆ ಬಂದರು. ಅವರಲ್ಲಿ ಪಂಜಾಬಿನ ಸಿಬ್ಬರು, ದಕ್ಷಿಣದ ಮದ್ರಾಸಿಗಳು, ಮುಸ್ಲಿಮರು, ಅಸ್ಪಷ್ಯರು ಎಲ್ಲರೂ ಇದ್ದರು. ಅವರು ಫಿಜಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಸಾಕಷ್ಟು ...