Posts

ವಿಜಯನಗರ ಕಾಲದ ನೀರಾವರಿ ವ್ಯವಸ್ಥೆ

ಪೀಠಿಕೆ: ಸುಮಾರು ೨೫೦ ವರ್ಷಗಳಿಗೂ ಹೆಚ್ಚು ಕಾಲ ವೈಭವದಿಂದ ಮೆರೆದ ವಿಜಯನಗರ ರಾಜ್ಯವು ಅನೇಕ ವಿಶಿಷ್ಠ ವ್ಯವಸ್ಥೆಗಳನ್ನು ಹೊಂದಿದ್ದು, ಇಂದಿಗೂ ಅವು ಅಧ್ಯಯನ ಯೋಗ್ಯವಾಗಿವೆ. ಅಂತಹ ಅಂಶಗಳಲ್ಲಿ ಆ ಕಾಲದ ನೀರು ಸರಬರಾಜು ಮತ್ತು ನೀರಾವರಿ ವ್ಯವಸ್ಥೆಯು ಒಂದು. ಪ್ರಸ್ತುತ ಲೇಖನದಲ್ಲಿ ಈ ವಿಷಯದ ಬಗ್ಗೆ ಸಾದ್ಯವಾದಷ್ಟು ವಿವರಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ರಾಜಧಾನಿ ವಿಜಯನಗರದ ನೀರು ಪೂರೈಕೆಯ ವ್ಯವಸ್ಥೆಗಳು ವಿಜಯನಗರವು ಭಾರತದ ಮತ್ತು ಕರ್ನಾಟಕದ ಮಧ್ಯಕಾಲೀನ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಹೊಂದಿದೆ . ಈ ಪಟ್ಟಣದ ಸಿರಿವಂತಿಕೆಯನ್ನು ಕಂಡ ಅಂದಿನ ವಿದೇಶಿಯ ಪ್ರವಾಸಿಗರು ಇಲ್ಲಿನ ಅರಮನೆ , ಭವ್ಯ ದೇವಾಲಯಗಳು , ಮಹಾದ್ವಾರಗಳು , ಉಪನಗರಗಳು , ಬಜಾರುಗಳು , ತೋಟ , ಹೊಲ , ಗದ್ದೆಗಳ ವೈಭವವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ . ೧೬ನೇ ಶತಮಾನದಲ್ಲಿ ಈ ಪಟ್ಟಣವು ರೋಮ್ ‌ ನಷ್ಟು ಜನಸಂಖ್ಯೆಯನ್ನು ಹೊಂದಿತ್ತೆಂದು ವರ್ಣಿಸಿರುವುದನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು . ಅಪಾರ ಜನಸಂಖ್ಯೆಯನ್ನು ಹೊಂದಿದ್ದ ಈ ಪ್ರಖ್ಯಾತ ರಾಜಧಾನಿಯಲ್ಲಿ ನಾಗರೀಕ ವ್ಯವಸ್ಥೆ ಅದರಲ್ಲೂ ದಿನನಿತ್ಯದ ಬಳಕೆಗೆ ಮೂಲ ಆಧಾರವಾದ ನೀರಿನ ಸರಬರಾಜು   ವ್ಯವಸ್ಥೆಯ ಬಗೆಗೆ ಕೈಗೊಂಡ ಕ್ರಮಗಳು ಅಧ್ಯಯನ ಯೋಗ್ಯವಾಗಿವೆ . ನಗರದ ನೀರು ಸರಬರಾಜು ವ್ಯವಸ್ಥೆಯ ಬಗೆಗಿನ ಅನೇಕ ಮಾಹಿತಿಗಳು ...