Posts

ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಪಲ್ಲವ ಅರಸರು ( ಸಾ . ಶ . ವ . 200-800)   ಆರಂಭಿಕ ಪಲ್ಲವ ಅರಸರ ವಂಶಾವಳಿಯನ್ನು ರಚಿಸುವಲ್ಲಿ, ಆಧಾರಗಳ ಕೊರತೆ ಇರುವ ಕಾರಣ, ಅನೇಕ ತೊಡಕುಗಳಿವೆ. ಆದರೂ ಅವರ ಕಾಲವನ್ನು ಪ್ರಾಕೃತ ಶಾಸನಗಳ ಕಾಲದ ಅರಸರು, ಸಂಸ್ಕೃತ ಶಾಸನಗಳ ಕಾಲದ ಅರಸರು ಮತ್ತು ಶಿಲಾಶಾಸನಗಳ ಕಾಲದ ಅರಸರು ಎಂದು ಮೂರು ವಿಭಾಗಗಳಾಗಿ ಅಧ್ಯಯನ ಮಾಡಲಾಗುತ್ತದೆ. I. ಪ್ರಾಕೃತ ಶಾಸನಗಳ ಕಾಲ:- ಶಿವಸ್ಕಂಧವರ್ಮ - 4 ನೆಯ ಶತಮಾನದ ಆದಿಭಾಗ II. ಸಂಸ್ಕೃತ ಶಾಸನಗಳ ಕಾಲ:- ಹದಿನಾರಕ್ಕೂ ಹೆಚ್ಚು ರಾಜರು ಸಾ.ಶ.ವ. 350 ರಿಂದ 575 ರ ವರೆಗೆ ಆಳಿದರು . ಅವರಲ್ಲಿ ಒಂದನೆಯ ಸಿಂಹವರ್ಮ , 1 ನೆಯ ಸ್ಕಂಧವರ್ಮ , ವೀರಕುರ್ಚ , 2 ನೆಯ ಸ್ಕಂಧವರ್ಮ , ವಿಷ್ಣುಗೋಪ ಮುಂತಾದವರು ಪ್ರಮುಖರು . III. ಶಿಲಾ ಶಾಸನಗಳ ಕಾಲದ ಅರಸರು ಒಂದನೆ ಮಹೇಂದ್ರವರ್ಮ – (600-630) ಒಂದನೆ ನರಸಿಂಹವರ್ಮ – (630-668) ಎರಡನೆ ಮಹೇಂದ್ರವರ್ಮ – (668-670) ಒಂದನೆ ಪರಮೇಶ್ವರವರ್ಮ – (670-695) ಇಮ್ಮಡಿ ನರಸಿಂಹವರ್ಮ – (700-728) ಇಮ್ಮಡಿ ಪರಮೇಶ್ವರವರ್ಮ – (728-731) ಎರಡನೆ ನಂದಿವರ್ಮ :- (731-795) ದಂತಿವರ್ಮ – (795-846) ಮುಮ್ಮಡಿ ನಂದಿವರ್ಮ – (846-869) ನೃಪತುಂಗ ವರ್ಮ – (869-880) ಅಪರಾಜಿತವರ್ಮ – (880-897) ***** ಸೂಚನೆ:- ವಾಸ್ತುಶಿಲ್ಪದ ಬಗೆಗಿನ  ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ...

ಬಸವಣ್ಣನವರ ಜೀವಿತದ ಪರಮಾವಧಿಯ ಕಾಲ.

   ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ವಚನಕಾರರ ಕಾಲವನ್ನು ಖಚಿತವಾಗಿ ಗುರುತಿಸಲು ಶಾಸನಗಳು ಪ್ರಮುಖ ನೆರವನ್ನು ನೀಡಿವೆ . ಅಂತೆಯೇ ಬಸವಣ್ಣನವರ ಜೀವಿತಾವಧಿಯ ಕಾಲವನ್ನು ಶಾಸನಗಳ ಪೂರಕ ಮಾಹಿತಿಗಳಿಂದ ಕ್ರಿ . ಶ .1167 ಕ್ಕೆ ಬದಲಾಗಿ ಕ್ರಿ . ಶ .1185-86 ಎಂದು ಸುಮಾರು 19 ವರ್ಷಗಳಷ್ಟು ಮುಂದಕ್ಕೆ ಹಾಕಲಾಗಿದೆ . ಏಕೆಂದರೆ, ಬಸವಣ್ಣನವರ ಸಮಕಾಲೀನರೂ ಅನುಯಾಯಿಗಳೂ ಸಮವಯಸ್ಕರೂ ಆದ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕೊನೆಯ ತೆಲಂಗಾಣ ಶಾಸನ ಕ್ರಿ . ಶ 1187 ರಲ್ಲಿ ದೊರೆತಿದೆ . ಅಲ್ಲದೇ, ಬಸವಣ್ಣನವರ ಅಭಿಮಾನಿ ಮತ್ತು ಅನುಯಾಯಿಯಾದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಐಕ್ಯರಾಗುವುದಕ್ಕೆ ಒಂದು ವರ್ಷ ಮುಂಚೆ ಬಸವಣ್ಣನವರು ಐಕ್ಯರಾದರೆಂದು ಪಂಡಿತಾರಾಧ್ಯುಲ ಚರಿತ್ರೆಯಿಂದ ತಿಳಿಯಬಹುದಾಗಿದೆ . ತೆಲಂಗಾಣ ಶಾಸನದಲ್ಲಿಯ ಉಲ್ಲೇಖದಿಂದ ಕ್ರಿ . ಶ 1187 ರಲ್ಲಿ ಪಂಡಿತಾರಾಧ್ಯರು ಐಕ್ಯರಾದರು ಎಂದು ತಿಳಿದುಬರುವುದರಿಂದ ಅವರ ಸಮಕಾಲೀನರಾದ ಬಸವಣ್ಣನವರು ಕ್ರಿ . ಶ . 1185-86 ರವರೆವಿಗೂ ಬದುಕಿದ್ದರು ಎಂಬುದಾಗಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ . ಹೀಗಾಗಿ ಬಸವಣ್ಣನವರ ಜೀವಿತದ ಪರಮಾವಧಿಯ ಕಾಲ ಕ್ರಿ . ಶ 1167 ಕ್ಕೆ ಬದಲಾಗಿ ಕ್ರಿ . ಶ 1185-86 ಎಂದು ಇಟ್ಟುಕೊಳ್ಳಬಹುದಾಗಿದೆ ಎಂಬ ನಿಲುವು ಇತ್ತೀಚೆಗೆ ಸಂಶೋಧಕರಿಂದ ವ್ಯಕ್ತವಾಗಿದೆ . ***** ...