Posts

Showing posts from September, 2020

ಪ್ರಥಮ ಕರ್ನಾಟಿಕ್‌ (Carnatic) ಯುದ್ಧ, ಹಿನ್ನೆಲೆ, ಕಾರಣಗಳು, ಗಟನಾವಳಿಗಳು ಮತ್ತು ಪರಿಣಾಮಗಳು

ಕರ್ನಾಟಿಕ್ ಯುದ್ಧಗಳು • ಇವು ರಾಜಕೀಯ ಅಧಿಕಾರ ಸ್ಥಾಪನೆಗಾಗಿ ನಡೆದ ಯುದ್ಧಗಳು . • ಬ್ರಿಟಿಷ್ ಮತ್ತು ಫ್ರೆಂಚರ ನಡುವೆ . • ದಕ್ಷಿಣ ಭಾರತದಲ್ಲಿ ನಡೆದವು . ಕರ್ನಾಟಿಕ್ ಪ್ರದೇಶ ಎಂದರೆ ಯಾವುದು ? • ಯೂರೋಪಿಯನ್ನರು ದಕ್ಷಿಣ ಭಾರತದ ಪೂರ್ವ ಕರಾವಳಿಯ ಕೋರಮಂಡಲ ತೀರ ಮತ್ತು ಅದರ ಒಳನಾಡನ್ನು “ ಕರ್ನಾಟಿಕ್ ” ಎಂದು ಕರೆಯುತ್ತಿದ್ದರು . ಒಟ್ಟು ಮೂರು ಕರ್ನಾಟಿಕ್ ಯುದ್ಧಗಳು . • ಮೊದಲನೆ ಯುದ್ಧ :- 1746 – 48. • ಎರಡನೆ ಯುದ್ಧ :- ೧೭೪೯ – ೫೪ . • ಮೂರನೆ ಯುದ್ಧ :- ೧೭೫೮ – ೧೭೬೩ . ಯುದ್ಧಗಳ ಪ್ರಮುಖ ಕಾರಣಗಳು • ಪಾರಂಪರಿಕ ವೈಷಮ್ಯ . • ಆಂಗ್ಲ ಮತ್ತು ಫ್ರೆಂಚರ ಸೈನಿಕ ಸಾಮರ್ಥ್ಯಗಳು . • ರಾಜಕೀಯ ಮಹತ್ವಾಕಾಂಕ್ಷೆ . • ಸ್ಥಳೀಯ ಅರಸರ ಒಳಜಗಳಗಳು . • ಭೂಪ್ರದೇಶಗಳ ಬಯಕೆ . •     ದಕ್ಷಿಣ ಭಾರತದಲ್ಲಿದ್ದ ಅಂದಿನ ರಾಜಕೀಯ ಸ್ಥಿತಿ . • ಮೊಗಲರ ಸುಬೇದಾರ ’ ನಿಜಾಮ್ ಉಲ್ ಮುಲ್ಕ್ ಆಸಫ್ ಜಾ ’ ಹೈದ್ರಾಬಾದ್ ಸುಬಾವನ್ನು ಸ್ವತಂತ್ರವಾಗಿ ಆಳುತ್ತಿದ್ದ; ಔರಂಗಜೇಬನ ಮರಣಾನಂತರ . • ಇವನ ಅಧೀನ ಪ್ರದೇಶ ಕರ್ನಾಟಿಕ್ ಮತ್ತು ಅದರ ರಾಜಧಾನಿ ಅರ್ಕಾಟ್ . • ಕರ್ನಾಟಿಕ್ ಪ್ರದೇಶದ ನವಾಬ “ ಅನ್ವರುದ್ದೀನ್” .   ಮೊದಲನೆ ಕರ್ನಾಟಿಕ್ ಯುದ್ಧ – ೧೭೪೬ - ೪೮ . • ತಕ್ಷಣದ ಕಾರಣಗಳು :- • ...

ಸಾಹಿತ್ಯಾಧಾರಗಳು - Literary Sources

ಸಾಹಿತ್ಯಾಧಾರಗಳು - Literary Sources. ಪೀಠಿಕೆ: ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿರುವ ಆಧಾರಗಳನ್ನು ಸಾಹಿತ್ಯಾಧಾರಗಳು ಎನ್ನುವರು. ಇವುಗಳು ದೇಶೀಯ ಮತ್ತು ವಿದೇಶೀಯ ಬರವಣಿಗೆ ಎರಡರಲ್ಲೂ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಪಾಲಿ, ಪ್ರಾಕೃತ, ಸಂಸ್ಕೃತ, ಅರ್ಧಮಾಗಧಿ, ಕನ್ನಡ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಲ್ಲಿ ಈ ಆಧಾರಗಳು ಕಂಡುಬರುತ್ತವೆ. ವಿದೇಶೀಯ ಭಾಷೆಗಳಾದ ಗ್ರೀಕ್‌, ರೋಮನ್‌, ಪರ್ಷಿಯಾ, ಅರಬ್‌, ತುರ್ಕಿ ಮತ್ತು ಚೀನೀ ಭಾಷೆಗಳಲ್ಲೂ ಸಹ ಕಂಡುಬರುತ್ತವೆ. ಧಾರ್ಮಿಕ ಕೃತಿಗಳು, ಲೌಕಿಕ ಕೃತಿಗಳು, ಐತಿಹಾಸಿಕ ಕೃತಿಗಳು, ಪ್ರವಾಸ ಕಥನಗಳು – ಹೀಗೆ ವಿವಿಧ ರೀತಿಯ ಬರವಣಿಗೆಗಳನ್ನು ಇವು ಒಳಗೊಳ್ಳುತ್ತವೆ. ವರ್ಗೀಕರಣ: ಅಧ್ಯಯನದ ದೃಷ್ಟಿಯಿಂದ ಇವುಗಳನ್ನು 1. ದೇಶೀಯ ಮತ್ತು 2. ವಿದೇಶೀಯ ಬರವಣಿಗೆಗಳು ಎಂದು ವಿಭಾಗಿಸಬಹುದು. 1.      ದೇಶೀಯ ಬರವಣಿಗೆಗಳು : ಭಾರತೀಯ ಭಾಷೆಗಳಲ್ಲಿ (ಮೇಲೆ ಹೇಳಿರುವ) ರಚಿತವಾದ ಆಧಾರಗಳಿವು. ಇವುಗಳನ್ನು ಮತ್ತೆ ೪ ಉಪವಿಭಾಗಗಳಾಗಿ ಮಾಡಬಹುದು: ಅವುಗಳೆಂದರೆ, ಅ. ಧಾರ್ಮಿಕ ಸಾಹಿತ್ಯ. ಆ. ಐತಿಹಾಸಿಕ ಸಾಹಿತ್ಯ. ಇ. ಸಂಗಂ ಸಾಹಿತ್ಯ ಮತ್ತು ಈ. ವೈಜ್ಞಾನಿಕ ಸಾಹಿತ್ಯ.   ಅ. ಧಾರ್ಮಿಕ ಸಾಹಿತ್ಯ: ಧರ್ಮನಿಷ್ಠರಾದ ಪ್ರಾಚೀನ ಭಾರತೀಯರು ವಿಫುಲ ಧಾರ್ಮಿಕ ಸಾಹಿತ್ಯ ರಚಿಸಿದ್ದಾರೆ. ಈ ಸಾಹಿತ್ಯವನ್ನು ಮತ್ತೆ ವೈದಿಕ, ಜೈನ ಮತ್ತು ಬೌದ್ಧ ಸಾಹಿತ್ಯವೆಂದ...

ಇಲ್ತಮಶ್‌ - ಜೀವನ ಸಾಧನೆ; For Third Semester, K.U, Dharwad

ಇಲ್ತಮಶ್‌ 1211-36 ಆರಂಭಿಕ ಜೀವನ : ತುರ್ಕಿಸ್ತಾನದ ಇಲ್ಬರಿ ಪಂಗಡಕ್ಕೆ ಸೇರಿದ ಕುಲೀನ ಮನೆತನದವನು. ಸೋದರರ ಮತ್ಸರದ ಕಾರಣ ಗುಲಾಮನಾಗಿ ಮಾರಾಟ. ಜಮಾಲುದ್ದೀನ್‌ ಎಂಬ ವರ್ತಕನಿಂದ ಕುತುಬ್ ಉದ್‌ ದೀನ್‌ ಐಬಕನಿಗೆ ದೆಹಲಿಯಲ್ಲಿ ಮಾರಾಟ. ಐಬಕ್‌ ಆಗ ಘೋರಿಯ ರಾಜಪ್ರತಿನಿಧಿ. ದಕ್ಷತೆಯ ಕಾರಣ “ ಅಮೀರ್‌ ಶಿಕಾರ್ ”‌ ಆಗಿ ನೇಮಕ. ಮುಂದೆ ಗ್ವಾಲಿಯರ್‌, ಬುಲಂದ್‌ ಶಹರ್‌ ಮತ್ತು ಬದೌನ್‌ ಗಳಲ್ಲಿ ಗವರ್ನರ್‌ ಆಗಿ ನೇಮಕ. ಐಬಕನ ಮಗಳೊಂದಿಗೆ ವಿವಾಹ. ಗುಲಾಮತನದಿಂದ ಬಿಡುಗಡೆ. “ ಅಮೀರ್‌ ಉಲ್‌ ಉಮ್ರ ” ಎಂಬ ಉನ್ನತ ಹುದ್ದೆ. ಸಿಂಹಾಸನಾರೋಹಣ : 1211 ರಲ್ಲಿ. ಸುಲ್ತಾನ ಆರಾಮ್‌ ಶಾ ನನ್ನು ಸೋಲಿಸಿ ಪಟ್ಟವೇರಿದನು. ಆರಂಭಿಕ ತೊಂದರೆಗಳು : ಸಿಂಹಾಸನ ಹೂವಿನ ಹಾಸಿಗೆ ಆಗಿರಲಿಲ್ಲ. ಘಸ್ನಿಯ ದೊರೆ ತಾಜುದ್ದೀನ್‌ ಎಲ್ಡೂಜ್‌ ಇವನನ್ನು ತನ್ನ ಪ್ರತಿನಿಧಿ ಎಂದು ಸಾರಿದ. ಪಂಜಾಬಿನಲ್ಲಿ ನಾಸಿರುದ್ದೀನ್‌ ಕುಬಾಚ ಇವನ ಅಧಿಕಾರ ಅಲ್ಲಗಳೆದು ಸ್ವತಂತ್ರ ಘೋಷಿಸಿಕೊಂಡ. ಬಂಗಾಳದ ಅಲಿಮರ್ದಾನ್‌ ಖಿಲ್ಜಿ ಅವಿಧೇಯನಾಗಿ ವರ್ತಿಸತೊಡಗಿದ. ರಜಪೂತರು ಜಾಲೋರ್‌, ರಣತಂಬೋರ್‌ ಮತ್ತು ಗ್ವಾಲಿಯರ್‌ಗಳಲ್ಲಿ ಪ್ರಬಲರಾಗುತ್ತಿದ್ದರು. ದಿಗ್ವಿಜಯಗಳು : ಅ. ದೆಹಲಿಯಲ್ಲಿನ ತನ್ನ ವಿರೋಧಿ ಅಮೀರರನ್ನು ಸದೆಬಡಿದು, ಅವಧ್‌, ಬನಾರಸ್‌ ಮತ್ತು ಬದೌನಗಳಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡನು. ಆ. ತಾಜುದ್ದೀನ್‌ ಎಲ್ಡೂಜನ ವಿರುದ್ಧ ಗೆಲುವು 1216: ಎಲ್ಡೂಜನು 1215 ರಲ್ಲಿ ಲಾಹೋರ...

ನಾಣ್ಯಶಾಸ್ತ್ರ ಮತ್ತು ಸ್ಮಾರಕಗಳು

   ನಾಣ್ಯಶಾಸ್ತ್ರ ಮತ್ತು ಸ್ಮಾರಕಗಳು ಪುರಾತತ್ವ ಶಾಸ್ತ್ರಾಧಾರಗಳ ಅಧ್ಯಯನದ ಭಾಗವಾಗಿವೆ. “ನಾಣ್ಯಗಳ ವ್ಯವಸ್ಥಿತ ಅಧ್ಯಯನವನ್ನು ನಾಣ್ಯಶಾಸ್ತ್ರ ಅಥವಾ Numismatics ಎನ್ನುವರು.” ಇತರೆ ಮೂಲಗಳಿಂದ ಲಭ್ಯವಾಗುವ ಮಾಹಿತಿಗಳಿಗೆ ನಾಣ್ಯಗಳಿಂದ ಪೂರಕ ಅಂಶಗಳು ದೊರೆಯುತ್ತವೆ. ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ನಾಣ್ಯಗಳೇ ಏಕೈಕ ಲಭ್ಯ ಆಧಾರಗಳಾಗಿವೆ. ಉದಾ: ವಾಯುವ್ಯ ಭಾರತವನ್ನಾಳಿದ ಇಂಡೋ-ಗ್ರೀಕರ (ಸಾ.ಶ.ಪೂ. 1-2 ನೆ ಶತಮಾನಗಳಲ್ಲಿ) ಮೂವತ್ತು ಅರಸರ ಬಗ್ಗೆ ಮಾಹಿತಿ ಲಭ್ಯವಿರುವುದು ಕೇವಲ ನಾಣ್ಯಗಳಿಂದಲೇ. ಪ್ರಾಚೀನ ಕಾಲದಿಂದಲೂ ಅಂದರೆ, ವೈದಿಕ ಕಾಲದಿಂದಲೂ (ಸಾ.ಶ.ಪೂ 1300) ನಾಣ್ಯಗಳ ಬಳಕೆ ಭಾರತದಲ್ಲಿ ಕಂಡುಬರುತ್ತದೆ. ಪಣ, ಕರ್ಶಪಣ, ನಿಷ್ಕ, ಶತಮಾನ, ಕೃಷ್ಣಾಲ ಎಂಬ ನಾಣ್ಯಗಳ ಉಲ್ಲೇಖಗಳು ವೈದಿಕ ಸಾಹಿತ್ಯದಲ್ಲಿ ಕಂಡುಬರುತ್ತವೆ. ಅಲ್ಲದೇ ಮೌರ್ಯರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ದೊರೆತಿವೆ. ಅಂದಿನ ನಾಣ್ಯಗಳು ಗುರುತು ಹಾಕಿದ ಅಂದರೆ Punch marked ನಾಣ್ಯಗಳಾಗಿರುತ್ತಿದ್ದವು. ನಂತರದ ಕಾಲದಲ್ಲಿ ಎರಕ ಹಾಕುವ ನಾಣ್ಯ ಪದ್ಧತಿ ಆರಂಭವಾಯಿತು. ಪ್ರಾಚೀನ ಭಾರತದ ನಾಣ್ಯಗಳನ್ನು ಖಾಸಗಿ ನಾಣ್ಯಗಳೆಂದು ಕೆಲ ಯೂರೋಪಿನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರೂ, ಇತ್ತೀಚಿನ ಸಂಶೋಧನೆಗಳಿಂದ ಅವು ಸಾರ್ವಜನಿಕ ನಾಣ್ಯಗಳೆಂದು ಕಂಡುಬಂದಿದೆ. ಅಂತೆಯೇ ವಾಯುವ್ಯ ಭಾರತವನ್ನಾಳಿದ ಗ್ರೀಕರ ಪ್ರಭಾವದಿಂದ ಭಾರತದ ನಾಣ್ಯ ಪದ್ಧತಿಯಲ್ಲಿ ...

ಭಾರತದ ಇತಿಹಾಸ ಪುನರ್‌ರಚನೆಯಲ್ಲಿ ಶಾಸನಗಳು, ಮಹತ್ವ, ಪ್ರಮುಖ ಶಾಸನಗಳು ಮತ್ತು ಅವುಗಳ ದೋಷಗಳು.

ಶಾಸನಗಳು:- ಇವು ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆಗೆ ಬಹುಮುಖ್ಯ ಆಧಾರಗಳಾಗಿವೆ. ಶಾಸನಗಳ ವ್ಯ      ವಸ್ಥಿತ ಅಧ್ಯಯನವನ್ನು ಶಾಸನಶಾಸ್ತ್ರ ಅಥವಾ Epigraphy ಎನ್ನುವರು. ಸುಮಾರು 75-80 ಸಾವಿರದಷ್ಟು ಶಾಸನಗಳು ಲಭ್ಯ. ವಿವಿಧ ಭಾಷೆಗಳಲ್ಲಿ ರಚಿತ. ಬ್ರಾಹ್ಮಿ, ಕರೊಷ್ಠಿ, ಅರಾಮಿಕ್‌ ಮತ್ತು ದೇವನಾಗರಿ ಲಿಪಿಗಳನ್ನು ಬಳಸಿ ಬರೆಯಲಾಗಿದೆ. ಬಂಡೆಗಳು, ಸ್ತಂಭಗಳು, ಭಿತ್ತಿಗಳು, ವಿಗ್ರಹಗಳ ತಳಭಾಗ, ಗುಹೆಗಳು, ಮುದ್ರೆಗಳು, ಲೋಹಪಟಗಳ ಮೇಲೆ ಬರೆಯಲ್ಪಟ್ಟಿವೆ. ಶಾಸನಗಳನ್ನು ಚಿರಸ್ಥಾಯಿ ವಸ್ತುಗಳ ಮೇಲೆ ಬರೆಯಲಾಗುತ್ತಿತ್ತು. ಸಿಂಧೂ ಮುದ್ರೆಗಳು ಅತ್ಯಂತ ಪ್ರಾಚೀನ ಬರವಣಿಗೆಗಳು; ಆದರೆ ಅವುಗಳನ್ನು ಇನ್ನೂ ನಿಖರವಾಗಿ ಓದಲಾಗಿಲ್ಲ. ಪಾಕಿಸ್ತಾನದ ಸೊಹಗರ್‌ ನಲ್ಲಿ ಸಿಕ್ಕಿರುವ ಶಾಸನವೇ ಭಾರತದ ಅತ್ಯಂತ ಹಳೆಯ ಶಾಸನ. ಅಶೋಕನ ಶಾಸನಗಳು ಪ್ರಾಚೀನತೆಯಲ್ಲಿ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವನು ಸ್ಥಳೀಯ ಭಾಷೆಗಳಲ್ಲಿ ಶಾಸನಗಳನ್ನು ಬರೆಯಿಸಿದ್ದಾನೆ. ಆರಂಭಿಕ ಶಾಸನಗಳಲ್ಲಿ ಅವನ ಹೆಸರು ನಿಗೂಢ. ಸಾ.ಶ.ವ. 1915ರ ಮಸ್ಕಿ ಶಾಸನದಲ್ಲಿ ಬಿರುದುಸಹಿತ ಹೆಸರು ಉಲ್ಲೇಖ; ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು. ಮಧ್ಯಪ್ರದೇಶದ ಗುಜರ್ರಾ ಶಾಸನದಲ್ಲೂ ಇದೇ ಮಾಹಿತಿ. ಅವನ ಶಾಸನಗಳಿಂದ ನಿಖರ ಮಾಹಿತಿ ಲಭ್ಯವಾಗಿ ಇತಿಹಾಸ ಪುನರ್‌ ರಚನೆಗೆ ಆಧಾರ ಒದಗಿಸಿವೆ. ಕಾರಣ ಆತನನ್ನು “ಶಿಲಾಶಾಸನಗಳ ಪಿತಾಮಹಾ” ಎನ್ನಲಾಗಿದೆ. ಶಾಸನಗಳ ವರ್ಗೀಕರಣ:-...

ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆ; ಮೂಲಾಧಾರಗಳು

ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆ ಮೂಲಾಧಾರಗಳು ಮತ್ತು ವರ್ಗೀಕರಣ. SOURCES AND CLASSIFICATION     ಗತಿಸಿಹೋದ ಘಟನೆಗಳ ವ್ಯವಸ್ಥಿತ ಅಧ್ಯಯನವೇ ಇತಿಹಾಸ. ಗತಕಾಲದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಸಂಯೋಜಿಸುವ ಕಾರ್ಯವನ್ನು ಇತಿಹಾಸದ ಪುನರ್‌ ರಚನೆ ಎನ್ನುವರು. ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಪೋಲಕಲ್ಪಿತ ಅಥವಾ ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್‌ ರಚನೆಗೆ ಬಳಸುವ ಆಧಾರಗಳನ್ನು ಮೂಲಾಧಾರಗಳು ಎಂತಲೂ ಕರೆಯುವರು.   ಇಂತಹ ಮೂಲಾಧಾರಗಳು ಐತಿಹಾಸಿಕ ಮಹತ್ವವನ್ನು ಹೊಂದಿರಬೇಕು. ಯಾವುದೇ ದೇಶದ ಇತಿಹಾಸ ಪುನರ್‌ ರಚನೆಗೆ ವಿವಿಧ ಮೂಲಾಧಾರಗಳ ಅವಶ್ಯಕತೆ ಇರುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚಿಸುವಲ್ಲಿ ಆಧಾರಗಳ ಕೊರತೆಯನ್ನು ವಿದ್ವಾಂಸರು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದ್ದು, ಅವರು ಇತಿಹಾಸದ ಕೃತಿಗಳನ್ನು ರಚಿಸಿಲ್ಲ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಪ್ರಾಚೀನ ಭಾರತದ ಲಭ್ಯ ಸಾಹಿತ್ಯವು ಅಧಿಕ ಪ್ರಮಾಣದಲ್ಲಿ ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಅರಬ್‌ ವಿದ್ವಾಂಸ ಅಲ್ಬೇರೂನಿ (12 ನೆ ಶತಮಾನದ ಆದಿಭಾಗ) “ಭಾರತೀಯರನ್ನು ತಮ್ಮ ಪೂರ್ವ ಇತಿಹಾಸದ ಬಗ್ಗೆ ಕೇಳಿದರೆ ಒಂದೇಸಮನೇ ...