ಮೂಲಾಧಾರಗಳ ಅಧ್ಯಾಯದ ಕುರಿತ ಪ್ರಶ್ನಾವಳಿಗಳು

. ಇತಿಹಾಸ ಕುರಿತ ಒಂದು ವ್ಯಾಖ್ಯಾನವನ್ನು ಬರೆಯಿರಿ.

. ಇತಿಹಾಸದ ಪುನರ್ರಚನೆ ಎಂದರೇನು?

. ಇತಿಹಾಸದ ಪುನರ್ರಚನೆಗೆ ಯಾವುದು ಅತ್ಯವಶ್ಯಕವಾಗಿ ಬೇಕು?

. ಯಾವುದಾದರೂ ಐದು ಮೂಲಾಧಾರಗಳನ್ನು ಹೆಸರಿಸಿ.

. ಐತಿಹಾಸಿಕ ಮೌಲ್ಯ ಎಂದರೇನು?

. ಮೂಲಾಧಾರಗಳನ್ನು ಪ್ರಮುಖವಾಗಿ ಎಷ್ಟು ವಿಧವಾಗಿ ವರ್ಗೀಕರಿಸಬಹುದು?

. ಪುರಾತತ್ವ ಆಧಾರಗಳ ವರ್ಗೀಕರಣ ತಿಳಿಸಿರಿ.

. ಸಾಹಿತ್ಯಾಧಾರಗಳ ವರ್ಗೀಕರಣ ತಿಳಿಸಿರಿ.

. ಸಮತಲ ಉತ್ಖನನ ಎಂದರೇನು? ಉದಾಹರಣೆ ಕೊಡಿ.

೧೦. ಲಂಬ ಉತ್ಖನನ ಎಂದರೇನು? ಉದಾಹರಣೆ ಕೊಡಿ.

೧೧. ಕಾಲಗಣನೆಗೆ ಬಳಸುವ ಎರಡು ವಿಧಾನಗಳನ್ನು ತಿಳಿಸಿ.

೧೨. ಸಾಗರ ಉತ್ಖನನ ಎಂದರೇನು?

೧೩. ಸಾಗರ ಉತ್ಖನನಕ್ಕೆ ಎರಡು ಉದಾಹರಣೆ ಕೊಡಿ.

೧೪. ಸಾಹಿತ್ಯಾಧಾರಗಳು ಎಂದರೇನು?

೧೫. ಯಾವುವು ಸಾಹಿತ್ಯಾಧಾರಗಳು?

೧೬. ವಿದೇಶೀಯ ಆಧಾರಗಳೆಂದರೇನು?

೧೭. ಕೈಫಿಯತ್ತು ಎಂದರೇನು?

೧೮. ಬಖೈರು ಎಂದರೇನು?

೧೯. ಸಾಹಿತ್ಯಾಧಾರಗಳು ಯಾವೆಲ್ಲಾ ಭಾಷೆಗಳಲ್ಲಿ ಕಂಡುಬರುತ್ತವೆ?

೨೦. ದೇಶೀಯ ಭಾಷೆಗಳು ಯಾವುವು?

೨೧. ದೇಶೀಯ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧವಾಗಿ ವಿಂಗಡಿಸಬಹುದು? ಅವು ಯಾವುವು?

೨೨. ವಿದೇಶೀಯ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧವಾಗಿ ವಿಂಗಡಿಸಬಹುದು? ಅವು ಯಾವುವು?

೨೩. ಧಾರ್ಮಿಕ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧಗಳಾಗಿ ವಿಂಗಡಿಸಬಹುದು? ಅವು ಯಾವುವು?

೨೪. ಯಾವುವು ಐತಿಹಾಸಿಕ ಆಧಾರಗಳು ಎನಿಸಿಕೊಳ್ಳುತ್ತವೆ?

೨೫. ಐತಿಹಾಸಿಕ ಸಾಹಿತ್ಯವನ್ನು ಸಾಮಾನ್ಯವಾಗಿ ಯಾರು ರಚಿಸುತ್ತಿದ್ದರು?

೨೬. ಸಂಗಂ ಸಾಹಿತ್ಯ ಎಂದರೆ ಯಾವುದು?

೨೭. ವೈಜ್ಞಾನಿಕ ಸಾಹಿತ್ಯ ಎಂದರೇನು?

೨೮. ವೈದಿಕ ಸಾಹಿತ್ಯದ ಕೃತಿಗಳು ಯಾವ ಭಾಷೆಯಲ್ಲಿ ಕಂಡುಬರುತ್ತವೆ?

೨೯. ವೈದಿಕ ಸಾಹಿತ್ಯದ ಕೆಲವು ಕೃತಿಗಳನ್ನು ಹೆಸರಿಸಿ.

೩೦. ಜೈನ ಸಾಹಿತ್ಯದ ಕೃತಿಗಳು ಯಾವ ಭಾಷೆಯಲ್ಲಿ ಕಂಡುಬರುತ್ತವೆ?

೩೧. ಬೌದ್ಧ ಸಾಹಿತ್ಯದ ಕೃತಿಗಳು ಯಾವ ಭಾಷೆಯಲ್ಲಿ ಕಂಡುಬರುತ್ತವೆ?

೩೨. ಜೈನ ಸಾಹಿತ್ಯದ ಕೆಲವು ಕೃತಿಗಳನ್ನು ಹೆಸರಿಸಿ.

೩೩. ಬೌದ್ಧ ಸಾಹಿತ್ಯದ ಕೆಲವು ಕೃತಿಗಳನ್ನು ಹೆಸರಿಸಿ.

೩೪. ಹರ್ಷನ ಜೀವನ ಚರಿತ್ರೆ ಯಾವುದು? ಬರೆದವರು ಯಾರು?

೩೫. ಬಿಲ್ಹಣನ ಕೃತಿ ಯಾವುದು?

೩೬. ರಾಜತರಂಗಿಣಿಯ ಕರ್ತೃ ಯಾರು?

೩೭. ರಾಜತರಂಗಿಣಿ ಯಾವ ರಾಜ್ಯದ ಇತಿಹಾಸವನ್ನು ಒಳಗೊಂಡಿದೆ?

೩೮. ಬುದ್ಧ ಚರಿತ್ರೆ ರಚಿಸಿದವರು ಯಾರು?

೩೯. ಜಾತಕ ಕತೆಗಳು ಎಂದರೇನು?

೪೦. ವಿನಯಪೀಠಕ ಯಾವ ಮಾಹಿತಿಯನ್ನು ಒದಗಿಸುತ್ತದೆ?

೪೧. ಸುತ್ತಪೀಠಕ ಯಾವ ಮಾಹಿತಿಯನ್ನು ಒದಗಿಸುತ್ತದೆ?

೪೨. ಅಭಿಧಮ್ಮಪೀಠಕ ಯಾವ ಮಾಹಿತಿಯನ್ನು ಒದಗಿಸುತ್ತದೆ?

೪೩. ಮಹಾಜನಪದಗಳ ವಿವರ ಯಾವ ಕೃತಿಯಲ್ಲಿ ಕಂಡುಬರುತ್ತದೆ?

೪೪. ಮಿಲಿಂದಪನ್ಹ ಯಾವುದರ ಸಾರವಾಗಿದೆ?

೪೫. ಅರ್ಥಶಾಸ್ತ್ರದ ಕರ್ತೃಯಾರು?

೪೬. ಅರ್ಥಶಾಸ್ತ್ರ ಯಾವ ರಾಜಮನೆತನದ ಮಾಹಿತಿ ಒದಗಿಸುತ್ತದೆ?

೪೭. ಅಷ್ಟಾಧ್ಯಾಯಿ ಯಾರು ರಚಿಸಿದ ಕೃತಿ? ಅದು ಯಾವ ಮಾಹಿತಿಯನ್ನು ಒದಗಿಸುತ್ತದೆ?

೪೮. ವಾಕ್ಪತಿ ರಚಿಸಿದ ಕೃತಿ ಯಾವುದು?

೪೯. ಚಾಂದ್ಬರ್ದಾಯಿ ರಚಿಸಿದ ಕೃತಿ ಯಾವುದು?

೫೦. ಗುಪ್ತರ ಆಡಳಿತ ಕುರಿತ ಮಾಹಿತಿ ಯಾವ ಕೃತಿಯಲ್ಲಿ ಕಂಡುಬರುತ್ತದೆ?

೫೧. ರಘುವಂಶದ ಕರ್ತೃ ಯಾರು?

೫೨. ಮಾಳವಿಕಾಗ್ನಿಮಿತ್ರ ಯಾವ ಮಾಹಿತಿಯನ್ನು ಒದಗಿಸುತ್ತದೆ?

೫೩. ಕಾಳಿದಾಸನ ಯಾವ ಕೃತಿಗಳಲ್ಲಿ ಗುಪ್ತರ ಕಾಲದ ಜನಜೀವನದ ಮಾಹಿತಿ ಕಂಡುಬರುತ್ತದೆ?

೫೪. ಮುದ್ರಾರಾಕ್ಷಸ ಇದು ಯಾರ ಕೃತಿ?

೫೫. ವಿಶಾಖದತ್ತನ ಎರಡು ಪ್ರಮುಖ ಕೃತಿಗಳು ಯಾವುವು?

೫೬. ಹರ್ಷವರ್ಧನನ ನಾಟಕಗಳು ಯಾವುವು?

೫೭. ಶೂದ್ರಕನ ಕೃತಿ ಯಾವುದು?

೫೮. ಸಂಗಂ ಸಾಹಿತ್ಯ ಕಂಡು ಬರುವ ಪ್ರದೇಶ ಯಾವುದು?

೫೯. ಸಂಗಂ ಸಾಹಿತ್ಯ ಯಾವ ಕಾಲಘಟ್ಟದಲ್ಲಿ ರಚಿತವಾಗಿದೆ ಎಂದು ನಂಬಲಾಗಿದೆ?

೬೦. ಎಷ್ಟು ಸಂಗಂಗಳು ಇದ್ದವು ಎನ್ನಲಾಗಿದೆ?

೬೧. ಇಳಂಗೊ ಅಡಿಗಳ್ ರಚಿತ ಕೃತಿ ಯಾವುದು?

೬೨. ಚತ್ತನಾರನ ಕೃತಿ ಯಾವುದು?

೬೩. ತಿರುಕ್ಕುರಳ್ಇದು ಯಾರ ಕೃತಿ?

೬೪. ಸೆಕ್ಕಿಲಾರನು ರಚಿಸಿದ ಕೃತಿ ಯಾವುದು?

೬೫. ಶುಶ್ರೂತನ ಕೃತಿ ಯಾವುದು?

೬೬. ಚರಕ ಸಂಹಿತೆ ಇದು ಯಾರು ರಚಿಸಿದ ಕೃತಿ?

೬೭. ಬ್ರಹ್ಮಗುಪ್ತನ ಕೃತಿ ಯಾವುದು?

೬೮. ಆರ್ಯಭಟನು ಯಾರ ಕಾಲದಲ್ಲಿ ಜೀವಿಸಿದ್ದನು?

೬೯. ಕೀರ್ತಿವರ್ಮನ ಕೃತಿ ಯಾವುದು?

೭೦. ಗಜಾಷ್ಟಕ ರಚಿಸಿದ ರಾಜ ಯಾರು?

೭೧. ಗಜಶಾಸ್ತ್ರ ಇದು ಯಾರ ಕೃತಿ?

೭೨. ಲೋಕೋಪಕಾರದ ಕರ್ತೃಯಾರು?

೭೩. ಲೀಲಾವತಿಯ ಕರ್ತೃಯಾರು?

೭೪. ವೈಜ್ಞಾನಿಕ ಕೃತಿಗಳು ಒದಗಿಸುವ ಇನ್ನಿತರ ಮಾಹಿತಿಗಳು ಯಾವುವು?

೭೫. ವಿದೇಶೀಯ ಸಾಹಿತ್ಯ ಯಾರಿಂದ ರಚಿತವಾಗುತ್ತಿತ್ತು?

೭೬. ಅನಾಮಧೇಯ ರಚಿಸಿದ ಕೃತಿಯ ಹೆಸರೇನು?

೭೭. ಟಾಲೆಮಿಯು ಯಾವ ಕೃತಿಯನ್ನು ರಚಿಸಿದನು?

೭೮. ಸೆಲ್ಯುಕಸ್ಯಾವ ರಾಯಭಾರಿಯನ್ನು ಭಾರತಕ್ಕೆ ಕಳುಹಿಸಿದ್ದನು?

೭೯. ಇಂಡಿಕಾ ಇದು ಯಾರ ಕೃತಿ?

೮೦. ಇಂಡಿಕಾ ಕೃತಿ ಯಾವ ಅರಸರ ಮಾಹಿತಿ ಒದಗಿಸುತ್ತದೆ?

೮೧. ಪಾಟಲೀಪುತ್ರದ ಆಡಳಿತ ವ್ಯವಸ್ಥೆಯ ವಿವರಗಳು ಯಾವ ವಿದೇಶೀ ಕೃತಿಯಲ್ಲಿ ಕಂಡುಬಂದಿವೆ?

೮೨. ಸಿಂಹಳ ದೇಶದ ಪ್ರಾಚೀನ ಕೃತಿಗಳು ಯಾವುವು?

೮೩. ಸಿಂಹಳ ದೇಶದ ಪ್ರಾಚೀನ ಕೃತಿಗಳು ಯಾವ ಭಾಷೆಯಲ್ಲಿ ರಚಿತಗೊಂಡಿವೆ?

೮೪. ಪ್ಲೀನಿಯ ಬರವಣಿಗೆಗಳು ಯಾವ ಮಾಹಿತಿಯನ್ನು ಒದಗಿಸುತ್ತವೆ?

೮೫. ಫಾಹಿಯಾನ್ಯಾವ ದೇಶದ ಯಾತ್ರಿಕ?

೮೬. ಫಾಹಿಯಾನ್ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು?

೮೭. ಹು-ಎನ್-ತ್ಸಾಂಗ್ ವಿವರಗಳು ಯಾವ ನಿರ್ಣಾಯಕ ಯುದ್ಧದ ಮಾಹಿತಿ ಒದಗಿಸುತ್ತವೆ?

೮೮. ಇತ್ಸಿಂಗ್ಯಾವ ಕಾಲಘಟ್ಟದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು?

೮೯. ಯಾತ್ರಿಕರ ರಾಜ ಎಂದು ಹೆಸರಾದ ವ್ಯಕ್ತಿ ಯಾರು?

೯೦. ಬೌದ್ಧ ನಾಡಿನ ದಾಖಲೆಗಳು ಎಂಬ ಕೃತಿ ರಚಿಸಿದವರು ಯಾರು?

೯೧. ತಬರಿ ಯಾರ ರಾಯಭಾರಿಯಾಗಿದ್ದನು?

೯೨. ತಬರಿ ಯಾರ ಆಸ್ಥಾನಕ್ಕೆ ಭೇಟಿ ನೀಡಿದ್ದನು?

೯೩. ಸುಲೇಮಾನ್ಭಾರತಕ್ಕೆ ಭೇಟಿ ನೀಡಿದ್ದ ಕಾಲ ಯಾವುದು?

೯೪. ಸುಲೇಮಾನ್ಯಾವ ಪ್ರಸಿದ್ಧ ಅರಸನ ಸಾಮ್ರಾಜ್ಯದ ವಿವರಗಳನ್ನು ನೀಡಿದ್ದಾನೆ?

೯೫. ಅಲ್ಬೆರೂನಿ ಯಾರೊಂದಿಗೆ ಭಾರತಕ್ಕೆ ಬಂದನು?

೯೬. ತಾರೀಕ್ ಯಾಮಿನಿ ಇದು ಯಾರ ಕೃತಿ?

೯೭. ಅಲ್ಬೆರೂನಿಯ ಕೃತಿ ಯಾವುದು?

೯೮. ಯಾತ್ರಿಕ ತ್ರಯರು ಎಂದು ಯಾರನ್ನು ಕರೆಯುತ್ತಾರೆ?

೯೯. ಫಾಹಿಯಾನನ ಕೃತಿ ಯಾವುದು?

೧೦೦. ವಿದೇಶೀಯ ಆಧಾರಗಳನ್ನು ಇತಿಹಾಸ ಪುನರ್ರಚನೆಗೆ ಬಳಸುವಾಗ ಇತಿಹಾಸಕಾರ ಏಕೆ ಎಚ್ಚರವಹಿಸಬೇಕು?

೧೦೧. ಪ್ರಾಚೀನ ಭಾರತೀಯರ ಐತಿಹಾಸಿಕ ಪ್ರಜ್ಞೆಯ ಕೊರತೆಗೆ ಸಂಬಂಧಿಸಿದಂತೆ ವಿದ್ವಾಂಸರು ನೀಡುವ ಅಭಿಪ್ರಾಯಗಳು ಯಾವುವು?

೧೦೨. ಪ್ರಾಚೀನ ಭಾರತದಲ್ಲಿ ಐತಿಹಾಸಿಕ ಕೃತಿಗಳ ಕೊರತೆಗೆ ಸಂಬಂಧಿಸಿದಂತೆ .ಬಿ. ಕೀತ್ಅವರು ನೀಡುವ ಕಾರಣವೇನು?

೧೦೩. ಶಾಸನ ಪದದ ಅರ್ಥವನ್ನು ತಿಳಿಸಿರಿ.

೧೦೪. ಶಾಸನಗಳ ಉಪವರ್ಗೀಕರಣವನ್ನು ತಿಳಿಸಿರಿ.

೧೦೫. ಶಾಸನಗಳ ಮಹತ್ವ ಕುರಿತಂತೆ ವಿದ್ವಾಂಸರ ಎರಡು ಹೇಳಿಕೆಗಳನ್ನು ಬರೆಯಿರಿ.

೧೦೬. ಶಾಸನಗಳ ಯಾವುದಾದರೂ ಐದು ದೋಷಗಳನ್ನು ಪಟ್ಟಿ ಮಾಡಿರಿ.

೧೦೭. ಭಾರತದಲ್ಲಿನ ನಾಣ್ಯಗಳ ಪ್ರಾಚೀನತೆಯನ್ನು ತಿಳಿಸಿರಿ.

೧೦೮. ನಾಣ್ಯಗಳ ಅಧ್ಯಯನದ ಮಹತ್ವವನ್ನು ವಿವರಿಸಿ.

೧೦೯. ಸ್ಮಾರಕಗಳ ಅಧ್ಯಯನದಿಂದ ತಿಳಿದುಬರುವ ಮಾಹಿತಿಗಳು ಯಾವುವು?

೧೧೦. ಅಧ್ಯಾಯದ ಸ್ವಯಂ ಕಲಿಕೆಯ ನಿಮ್ಮ ಅನುಭವವನ್ನು ಐದು ವಾಕ್ಯಗಳಲ್ಲಿ ತಿಳಿಸಿರಿ.

******************************

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಭಾರತದ ಭೌಗೋಳಿಕ ಲಕ್ಷಣಗಳು.