ಅಧ್ಯಾಯ-5: ಹೊಸ ಭೂಸುಧಾರಣೆಗಳು -ಮಹಲವಾರಿ ಮತ್ತು ರೈತವಾರಿ - Revenue Administration of the British.
ಕಂಪೆನಿಯ ಕಂದಾಯ ಆಡಳಿತ ಪದ್ಧತಿ ( ಜಮೀನುದಾರಿ-1793, ರೈತವಾರಿ-1820ಮತ್ತು ಮಹಲ್‌ವಾರಿ ಪದ್ಧತಿಗಳು - 1833) ಹಿನ್ನೆಲೆ:- ಮೊಗಲರ ನಂತರದ ಅವಧಿಯಲ್ಲಿ ಜಮೀನುದಾರರು ಸಾಂಪ್ರದಾಯಿಕ ಕಂದಾಯ ವಸೂಲಿದಾರರಾಗಿದ್ದರು. 1765ರ ಅಲಹಾಬಾದ್ ಒಪ್ಪಂದದ ನಂತರ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕು ಲಭಿಸಿದ ಮೇಲೆ ಹಿಂದಿನಂತೆ ಜಮೀನುದಾರರೇ ಅಲ್ಲಿನ ಕಂದಾಯ ವಸೂಲಿ ಮಾಡಿ ಕಂಪೆನಿಗೆ ಸಲ್ಲಿಸುತ್ತಿದ್ದರು. ಆದರೆ ಕಂದಾಯದ ಸೋರಿಕೆಯನ್ನು ತಡೆಗಟ್ಟಲು ಜಮೀನುದಾರರ ಮೇಲ್ವಿಚಾರಣೆಗಾಗಿ 1769 ರಲ್ಲಿ ಆಂಗ್ಲ ಕಂದಾಯ ನಿರೀಕ್ಷಕರ ನೇಮಕ ಮಾಡಲಾಯಿತು. ಮುಂದೆ 1772ರಲ್ಲಿ ಐದು ವರ್ಷಗಳ ಹರಾಜು ಪದ್ಧತಿ ಜಾರಿಗೆ ತರಲಾಯಿತು; 1777 ರಲ್ಲಿ ಅದನ್ನು ವಾರ್ಷಿಕ ಹರಾಜು ವ್ಯವಸ್ಥೆಯಾಗಿ ಬದಲಾವಣೆ ಮಾಡಲಾಯಿತು. ಈ ಪದ್ಧತಿಯಲ್ಲಿದ್ದ ದೋಷಗಳನ್ನು ಸರಿಪಡಿಸಲು ಬ್ರಿಟಿಷರು ಭಾರತದ ಬೇರೆ-ಬೇರೆ ಭಾಗಗಳಲ್ಲಿ ವಿಭಿನ್ನ ಕಂದಾಯ ವಸೂಲಿಯ ಪದ್ಧತಿಗಳನ್ನು ಜಾರಿಗೊಳಿಸಿದರು. 1. ಶಾಶ್ವತ ಭೂಕಂದಾಯ ಪದ್ಧತಿ:- ಹರಾಜು ಪದ್ಧತಿಯಲ್ಲಿನ ಅವ್ಯವಸ್ಥೆಗಳ ಕಾರಣ ಕ್ರಮಬದ್ಧವಾದ ಕಂದಾಯ ವಸೂಲಿಗಾಗಿ ಹೊಸ ಪದ್ಧತಿಯೊಂದನ್ನು ಜಾರಿಗೆ ತರಲು 1784 ರಲ್ಲಿ ಲಂಡನ್ನಿನಲ್ಲಿದ್ದ ಕಂಪೆನಿಯ ನಿರ್ದೇಶಕರ ಮಂಡಳಿಯು ಬಂಗಾಳದ ಗವರ್ನರ್ ಜನರಲ್‌ನಿಗೆ ಸೂಚನೆ ನೀಡಿತು. ಅದರಂತೆ ಅಂದಿಗೆ ಕಂಪೆನಿಯ ಕಂದಾಯ ಮಂಡಳಿಯ ಮುಖ್ಯಸ್ಥನಾಗಿದ್ದ ಸರ್. ಜಾನ್ ಶೋರ್ ನೇತೃತ್ವದಲ್ಲಿ ಹೊಸ ಪದ್ಧತಿಯನ್ನು 1793 ರಲ್ಲಿ ಜ