ಮರಣದಂಡನೆಯ ಮೇಲಿನ ಚರ್ಚೆ - Debate on Abolition of Death Penalty
ಸಂವಿಧಾನ ರಚನಾ ಸಭೆಯು 1947-49 ರ ನಡುವೆ ಮರಣ ದಂಡನೆಯ ಮೇಲಿನ ಚರ್ಚೆಯನ್ನು ಕೈಗೊಂಡಿತ್ತು. ಚರ್ಚೆಯು ಮರಣ ದಂಡನೆಯ ನ್ಯಾಯಾಧೀಶ ಕೇಂದ್ರಿತ ಸ್ವಭಾವ , ಅದ ನ್ನು ಬಳಸುವಲ್ಲಿ ಉಂಟಾಗಬಹುದಾದ ಸಂಭವನೀಯ ಅನಿಶ್ಚಿತತೆ , ಬಡವರು ಮತ್ತು ತುಳಿತಕ್ಕೊಳಗಾದ ವರ್ಗಗಳ ವಿರುದ್ಧ ಅದನ್ನು ಬಳಸುವಲ್ಲಿ ತಾರತಮ್ಯದ ಪ್ರಭಾವ ಮತ್ತು ಅಂತಿಮ ತೀರ್ಪಿನಲ್ಲಿ ದೋಷದ ಸಾಧ್ಯತೆಯ ಕುರಿತು ನಡೆಯಿತು . Z.H. ಲಾರಿ ಅವರು ಪ್ರಸ್ತಾಪಿತ ವಿಧಿಗೆ ಉಪವಿಧಿ 11(B) ಸೇರಿಸುವಂತೆಯು, ಅದರಲ್ಲಿ ಹಿಂಸಾತ್ಮಕ ರಾಷ್ಟ್ರದ್ರೋಹದ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಪ್ರಕರಣಗಳಲ್ಲಿ ಮರಣದಂಡನೆಯ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸೂಚಿಸಿದರು. ಏಕೆಂದರೆ ಜಗತ್ತಿನ ಸುಮಾರು 30 ದೇಶಗಳಲ್ಲಿ ಮರಣದಂಡನೆಯು ರದ್ದಾಗಿದ್ದು, ಅಲ್ಲಿನ ಸಮಾಜ ಮತ್ತು ವ್ಯಕ್ತಿಗಳು ಈ ಶಿಕ್ಷೆ ಇಲ್ಲದೆಯೂ ರಕ್ಷಿಸಲ್ಪಡುತ್ತಿವೆ. ಅಲ್ಲದೇ ಸದರಿ ಶಿಕ್ಷೆಯು ಜಾರಿಗೊಂಡ ನಂತರ ನ್ಯಾಯಾಲಯಕ್ಕೆ ಅಪರಾಧಿಯು ತಪ್ಪು ಮಾಡಿರಲಿಲ್ಲವೆಂಬ ಸತ್ಯ ಮನವರಿಕೆಯಾದರೂ ಸಹ ಶಿಕ್ಷಿತನು ಜೀವಂತವಾಗಿರುವುದಿಲ್ಲವಾದ್ದರಿಂದ ನ್ಯಾಯಾಲಯವು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮಾನವ ಜನ್ಮವು ಅಮೂಲ್ಯವಾಗಿದ್ದು, ಅವನು ಸಮಾಜ ಮತ್ತು ಇತರರ ಜೀವಗಳಿಗೆ ಅಪಾಯಕಾರಿಯಾಗಿದ್ದಲ್ಲಿ ಮಾತ್ರವೇ ಒಬ್ಬ ವ್ಯಕ್ತಿಯ ಜೀವವನ್ನು ಕಾನೂನಾತ್ಮಕ ಶಿಕ್ಷೆಯ ಮೂಲಕ ತೆಗೆ...