Posts

Showing posts from November, 2021

ಕದಂಬರ ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳ ಪ್ರಶ್ನಾವಳಿಗಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1. ಕದಂಬ ಅರಸರು ಎಂಥಹ ಪ್ರಭುತ್ವ ಹೊಂದಿದ್ದರು? 2. ಜ್ಯೇಷ್ಠಪುತ್ರನಿಗೆ ಅಧಿಕಾರ ಪ್ರಾಪ್ತಿ ಎಂದರೇನು? 3. ಕದಂಬರ ಮಂತ್ರಿಮಂಡಲದಲ್ಲಿ ಎಷ್ಟು ಸದಸ್ಯರಿದ್ದರು? 4. ಕದಂಬರ ಆರಂಭಿಕ ಆಡಳಿತ ಭಾಷೆ ಯಾವುದಾಗಿತ್ತು? 5. ಕದಂಬರ ಯುವರಾಜರನ್ನು ಯಾವ ಕಾರಣಕ್ಕಾಗಿ ಮಾಂಡಲೀಕರನ್ನಾಗಿ ನೇಮಿಸಲಾಗುತ್ತಿತ್ತು? 6.      ಬೆಳಗಾವಿ ಜಿಲ್ಲೆಯಲ್ಲಿದ್ದ ಕದಂಬರ  ಉಪರಾಜಧಾನಿ ಯಾವುದು? 7.      ಪ್ರಧಾನ ನ್ಯಾಯಾಧೀಶನ ಹೆಸರೇನು? 8.      ರಾಜ್ಯದ ದೊಡ್ಡ ಆಡಳಿತ ಘಟಕ ಯಾವುದು? 9.      ಕಂಪಣದ ಅಧಿಕಾರಿಗಳನ್ನು ಏನೆಂದು ಕರೆಯಲಾಗುತ್ತಿತ್ತು? 10.   ಯಾರು ಸರ್ವೋಚ್ಛ ನ್ಯಾಯಾಧೀಶನಾಗಿದ್ದನು? 11.   ಹಿಂಸಾಪರಾಧಕ್ಕೆ ಎಷ್ಟು ಗದ್ಯಾಣಗಳ ದಂಡ ವಿಧಿಸಲಾಗುತ್ತಿತ್ತು? 12.   ಕೊಲೆ ಅಪರಾಧದಲ್ಲಿ ಸಂತ್ರಸ್ತರಿಗೆ ಎಷ್ಟು ಗದ್ಯಾಣಗಳ ಪರಿಹಾರ ನೀಡಲಾಗುತ್ತಿತ್ತು? 13.   ಭೂತೆರಿಗೆಯ ಪ್ರಮಾಣವೆಷ್ಟು? 14.   ಪೆರ್ಜುಂಕ ಎಂಬ ತೆರಿಗೆ ಯಾವುದಕ್ಕೆ ಸಂಬಂಧಿಸಿದ್ದು? 15.   ಹೇರುಗಳು ಎಂದರೇನು? 16.   ಮಾರಾಟ ತೆರಿಗೆಯನ್ನು ಏನೆಂದು ಕರೆಯಲಾಗುತ್ತಿತ್ತು? 17.   ವೀಳ್ಯದೆಲೆ ಸುಂಕ ಯಾವುದಾಗಿತ್ತು? 18.   ಚತುರಂಗ ಬಲ ಎಂದರೇನು? 19. ...

ಕದಂಬರ ಆಡಳಿತ ಪದ್ಧತಿ ಮತ್ತು ಸಾಂಸ್ಕೃತಿಕ ಕೊಡುಗೆಗಳು

ಆಡಳಿತ ಪದ್ಧತಿ:  ಮೊಟ್ಟಮೊದಲ ಬಾರಿಗೆ ಕನ್ನಡದ ನೆಲದಲ್ಲಿ ಸ್ವತಂತ್ರ ರಾಜಮನೆತನವೊಂದನ್ನು ಸ್ಥಾಪಿಸಿದ ಕದಂಬರ ಕೀರ್ತಿಯು ಅವರು ತಮ್ಮ ಮುಂದಿನ ಮನೆತನಗಳಿಗೆ ಮಾದರಿಯಾಗಿರುವಂತೆ ಆಡಳಿತ ಪದ್ಧತಿಯೊಂದನ್ನು ರೂಢಿಸುವ ಮೂಲಕ ಇಮ್ಮಡಿಗೊಂಡಿತು.   ಕದಂಬರ ಆಡಳಿತ ಪದ್ಧತಿಯನ್ನು ಕೇಂದ್ರಾಡಳಿತ ಮತ್ತು ಪ್ರಾಂತ್ಯಾಡಳಿತ ಎಂದು ಎರಡು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದು. ಕೇಂದ್ರಾಡಳಿತ: ಶಾತವಾಹನರ ನಂತರ ಅಧಿಕಾರಕ್ಕೆ ಬಂದ ಇವರು ಅವರ ಪದ್ಧತಿಯನ್ನು ಕೆಲವು ಮಾರ್ಪಾಡುಗಳೊಂದಿಗೆ ಮುಂದುವರಿಸಿದರು. ರಾಜಪ್ರಭುತ್ವ ಅಸ್ಥಿತ್ವದಲ್ಲಿತ್ತು. ಅವರು ಧರ್ಮಾಡಳಿತ ನಡೆಸುತ್ತಿದ್ದರು. ಪ್ರಜಾರಂಜನೆಯೇ ಆಡಳಿತದ ಪ್ರಮುಖ ಉದ್ದೇಶವಾಗಿತ್ತು. ಆಡಳಿತದಲ್ಲಿ ತರಬೇತಿ ನೀಡುವ ಸಲುವಾಗಿ ಯುವರಾಜರನ್ನು ಮಾಂಡಲೀಕರನ್ನಾಗಿ   ನೇಮಕ ಮಾಡುತ್ತಿದ್ದರು.ತಂದೆಯ ಮರಣಾನಂತರ ಅವನ  ಜೇಷ್ಠಪುತ್ರನಿಗೆ ಸಿಂಹಾಸನ ಲಭ್ಯವಾಗುತ್ತಿತ್ತು. ಕದಂಬ ಅರಸರು ಮತ್ತು ಯುವರಾಜರು ಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದರು. ಅವರದು ನಿರಂಕುಶ ಆಡಳಿತವಾಗಿರಲಿಲ್ಲ. ಆಡಳಿತದಲ್ಲಿ ಪ್ರಜಾಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತಿತ್ತು. ಆಡಳಿತಕ್ಕೆ ಮಂತ್ರಿಗಳ ಸಲಹೆ ಪಡೆಯಲಾಗುತ್ತಿತ್ತು. ಯುದ್ಧಗಳಲ್ಲಿ ಸೇನೆಯ ಮುನ್ನಡೆ ಮತ್ತು ರಕ್ಷಣೆಯ ಕಾರ್ಯಗಳು ರಾಜನಿಂದ ನಿರ್ವಹಿಸಲ್ಪಡುತ್ತಿದ್ದವು. ಮಂತ್ರಿಗಳು: - ರಾಜನಿಗೆ ಆಡಳಿತದಲ್ಲಿ ನೆರವಾಗಲು ಪಂಚಪ್ರಧಾನರೆಂಬ ಮಂತ್ರಿಗಳಿದ್ದರು. ಅ...

ಬನವಾಸಿಯ ಕದಂಬರು - ಪರಿಷ್ಕೃತ ವಾಚನ ಸಾಮಗ್ರಿ

ಬನವಾಸಿಯ ಕದಂಬರ ರಾಜಕೀಯ ಇತಿಹಾಸ ಪೀಠಿಕೆ:  ಇದು  ಮೊದಲ ಕನ್ನಡದ ರಾಜ ಮನೆತನ. ಇವರು  ಶಾತವಾಹನರ ಉತ್ತರಾಧಿಕಾರಿಗಳು. ಸಾ.ಶ.ವ.  ೪ ರಿಂದ ೬ ನೆ ಶತಮಾನಗಳ ನಡುವೆ ಆಡಳಿತ ನಡೆಸಿದರು.  ಇವರು ತಮ್ಮನ್ನು "ಮಾನವ್ಯ ಗೋತ್ರಕ್ಕೆ ಸೇರಿದ ಹಾರೀತಿಪುತ್ರರು" ಎಂದು ಶಾಸನಗಳಲ್ಲಿ ಹೇಳಿಕೊಂಡಿದ್ದಾರೆ. ಕಾರಣ ಇವರು ಹಿಂದಿನ ಚುಟುಗಳ ಸಂಬಂಧಿಗಳಿರಬಹುದು ಎಂದು ನಂಬಲಾಗಿದೆ. ಬನವಾಸಿ ಇವರ  ಪ್ರಮುಖ  ಆಡಳಿತ ಕೇಂದ್ರವಾಗಿತ್ತು. ಬನವಾಸಿ ಮತ್ತು ಸುತ್ತಲಿನ ಪ್ರದೇಶಗಳನ್ನು  ಪ್ರಾಚೀನ ಕಾಲದಲ್ಲಿ ಕುಂತಳ ಎಂದು ಕರೆಯಲಾಗುತ್ತಿತ್ತು. ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಪ್ರದೇಶಗಳು ಇವರ ಆಡಳಿತದ ವ್ಯಾಪ್ತಿಗೆ ಒಳಪಟ್ಟಿದ್ದವು. ಆಧಾರಗಳು: ಚಂದ್ರವಳ್ಳಿ, ಚಿತ್ರದುರ್ಗ ಜಿಲ್ಲೆ, ಹಲ್ಮಿಡಿ ಹಾಸನ ಜಿಲ್ಲೆ, ತಾಳಗುಂದ (ಸ್ಥಾಣಕುಂದೂರು) ಶಿವಮೊಗ್ಗ ಜಿಲ್ಲೆ, ಹೆಬ್ಬಟ್ಟ, ಮಳವಳ್ಳಿ, ಮಂಡ್ಯ ಜಿಲ್ಲೆ, ಗುಡ್ನಾಪುರಗಳಲ್ಲಿನ ಶಿಲಾಶಾಸನಗಳು. ಹಲಸಿ ತಾಮ್ರಪಟಗಳು, ಬೆಳಗಾವಿ ಜಿಲ್ಲೆ, ಬೀರೂರು ತಾಮ್ರಪಟಗಳು,  ಚಿಕ್ಕಮಗಳೂರು ಜಿಲ್ಲೆ,ದೇವಗಿರಿ, ರಾಣೆಬೆನ್ನೂರು ತಾ, ಸಂಗೊಳ್ಳಿಯ ತಾಮ್ರಪಟಗಳು. ೨ನೆ ಕಾಳಿದಾಸನ ಕೌಂತಳೇಶ್ವರ ದೌತ್ಯಂ. ತಾಳಗುಂದ, ಬನವಾಸಿ, ಚಿತ್ರದುರ್ಗ, ಹಲಸಿ ಮೊದಲಾದ ಸ್ಥಳಗಳಲ್ಲಿನ ಇವರ ಸ್ಮಾರಕಗಳು. ಮೂಲ: ಶಾಂತಿವರ್ಮನ ತಾಳಗುಂದದ ಶಾಸನದಂತೆ ಮ...

ಬನವಾಸಿಯ ಕದಂಬರು - ರಾಜಕೀಯ ಇತಿಹಾಸ - ಸಂಕ್ಷಿಪ್ತ ಟಿಪ್ಪಣಿಗಳು

ಬನವಾಸಿಯ ಕದಂಬರು ಪೀಠಿಕೆ: ಮೊದಲ ಕನ್ನಡದ ರಾಜ ಮನೆತನ. ಶಾತವಾಹನರ ಉತ್ತರಾಧಿಕಾರಿಗಳು. ೪ ರಿಂದ ೬ ನೆ ಶತಮಾನಗಳ ನಡುವೆ ಆಡಳಿತ. ಮಾನವ್ಯ ಗೋತ್ರಕ್ಕೆ ಸೇರಿದ ಹಾರೀತಿಪುತ್ರರು. ಕಾರಣ ಹಿಂದಿನ ಚುಟುಗಳ ಸಂಬಂಧಿಗಳಿರಬಹುದು. ಬನವಾಸಿ ಆಡಳಿತ ಕೇಂದ್ರ. ಪ್ರಾಚೀನ ಹೆಸರು ಕುಂತಳ. ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಪ್ರದೇಶಗಳು ಆಡಳಿತದ ವ್ಯಾಪ್ತಿಗೆ. ಆಧಾರಗಳು: ಚಂದ್ರವಳ್ಳಿ, ಚಿತ್ರದುರ್ಗ ಜಿಲ್ಲೆ, ಹಲ್ಮಿಡಿ ಹಾಸನ ಜಿಲ್ಲೆ, ತಾಳಗುಂದ (ಸ್ಥಾಣಕುಂದೂರು) ಶಿವಮೊಗ್ಗ ಜಿಲ್ಲೆ, ಹೆಬ್ಬಟ್ಟ, ಮಳವಳಿ, ಮಂಡ್ಯ ಜಿಲ್ಲೆ, ಗುಡ್ನಾಪುರಗಳಲ್ಲಿನ ಶಿಲಾಶಾಸನಗಳು. ಹಲಸಿ ಬೆಳಗಾವಿ ಜಿಲೆ, ಮುತ್ತೂರು,  ದೇವಗಿರಿ ರಾಣೆಬೆನ್ನೂರು ತಾ, ಸಂಗೊಳ್ಳಿಯ ತಾಮ್ರಪಟಗಳು. ೨ನೆ ಕಾಳಿದಾಸನ ಕೌಂತಳೇಶ್ವರ ದೌತ್ಯಂ. ತಾಳಗುಂದ, ಬನವಾಸಿ, ಚಿತ್ರದುರ್ಗ, ಹಲಸಿ ಮೊದಲಾದ ಸ್ಥಳಗಳಲ್ಲಿನ ಇವರ ಸ್ಮಾರಕಗಳು. ಮೂಲ: ಶಾಂತಿವರ್ಮನ ತಾಳಗುಂದದ ಶಾಸನದಂತೆ ಮಯೂರಶರ್ಮ ಮೂಲಪುರುಷ. ಮನೆಯ ಬಳಿಯ ಕದಂಬ ವೃಕ್ಷದ ಕಾರಣ ಮನೆತನದ ಹೆಸರು. ಮಳವಳ್ಳಿ ಶಾಸನದಲ್ಲಿ ಮೊದಲ ಅರಸನನ್ನು ʼದ್ವಿಜೋತ್ತಮʼ ಎಂದು ಉಲ್ಲೇಖ; ಕಾರಣ ವೈದಿಕ ಧರ್ಮಕ್ಕೆ ಸೇರಿದ ಬ್ರಾಹ್ಮಣ ವರ್ಗದವರು. ಕದಂಬ ಅರಸರ ಕಾಲಾನುಕ್ರಮಣಿಕೆ - (345-525) ಮಯೂರಶರ್ಮ: (345 - 365) ಕಂಗವರ್ಮ: (365 - 390) ಭಗಿರಥವರ್ಮ: (390 - 415) ರಘುವರ್ಮ: (415 - 43...

ಅಧ್ಯಾಯ 2: ಕರ್ನಾಟಕದಲ್ಲಿ ಆರಂಭಿಕ ರಾಜಮನೆತನಗಳು - ಕರ್ನಾಟಕದಲ್ಲಿ ಮೌರ್ಯರು

   ಲಿಖಿತ ದಾಖಲೆಗಳು ಲಭ್ಯವಾದ ನಂತರದ ಕಾಲವನ್ನು ಇತಿಹಾಸದ ಆರಂಭ ಕಾಲ ಅಥವಾ ಐತಿಹಾಸಿಕ ಕಾಲ ಎಂದು ಕರೆಯುವರು. ಕರ್ನಾಟಕದಲ್ಲಿ ಈ ಕಾಲಘಟ್ಟವು ಅಶೋಕನ ಶಾಸನಗಳಿಗಿಂತ ಎರಡು ಶತಮಾನಗಳ ಹಿಂದೆಯೇ ಆರಂಭವಾಗಿದೆ. ಅಂದರೆ ಸು. ಸಾ.ಶ.ಪೂ 500 . ರಷ್ಟು ಹಿಂದಿನ ಸಾಹಿತ್ಯದ ತುಣುಕುಗಳು ಲಭ್ಯವಾಗಿವೆ. ಕರ್ನಾಟಕದ ಅಶೋಕನ ಶಾಸನಗಳ ಕಾಲವು ಸಾ.ಶ.ಪೂ 259-58 ಎಂದು ಗುರ್ತಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಅವನ ಶಾಸನಗಳು ಮೌರ್ಯರ ದಕ್ಷಿಣ ಗಡಿಯನ್ನು ತಿಳಿಸುತ್ತವೆ. (ಬ್ರಹ್ಮಗಿರಿ, ಅಶೋಕ ಸಿದ್ದಾಪುರ & ಜಟಿಂಗ ರಾಮೇಶ್ವರ) ಇಸಿಲ ಎಂಬುದು ಈ ಪ್ರಾಂತ್ಯಕ್ಕಿದ್ದ ಅಂದಿನ ಹೆಸರು. ಸುವರ್ಣಗಿರಿ ಅದರ ರಾಜಧಾನಿ; ಅಂದರೆ ಇಂದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ನಂಬಲಾಗಿದೆ. ಸು. ಸಾ.ಶ.ವ. 1500 ವರ್ಷಗಳಷ್ಟು ಹಿಂದಿನ ಕನ್ನಡ ಕೃತಿ ʼಸಿಂಗಿರಾಜ ಪುರಾಣʼ ದಲ್ಲಿ ಪಟ್ಟದಕಲ್ಲು ಕುರಿತು ಮಾಹಿತಿ ನೀಡುವಾಗ ಇದು ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬ ಉಲ್ಲೇಖವಿದೆ. ಅದಕ್ಕೂ ಹಿಂದೆ 11ನೆ ಶತಮಾನದ ಕೆಲವು ದಾಖಲೆಗಳ ಪ್ರಕಾರ ನಂದರು ಕುಂತಳದಲ್ಲೂ (ಬನವಾಸಿ) ಅಧಿಕಾರ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಕಾರಣ ಚಿತ್ರದುರ್ಗ ಮತ್ತು ಅದರ ಮೇಲಣ ಪ್ರದೇಶಗಳು ಮೌರ್ಯರು ಮತ್ತು ಅವರಿಗೂ ಹಿಂದೆ ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಇದರಿಂದ ದೃಢವಾಗುತ್ತದೆ. ಏಕೆಂದರೆ ಮೌರ್ಯರು ಇಡೀ ನಂದ ಸಾಮ್ರಾಜ್ಯವನ್ನು ಗೆದ್ದಿದ್ದರಿಂದ ಅವರ ನಂತರ ಅಧಿಕಾರಕ್...

ಭಾರತದ ಇತಿಹಾಸ, DSCC A1 ರ ಕೆಲವು ಮಾದರಿ ಪ್ರಶ್ನೆಗಳು. ಕರ್ನಾಟಕ ವಿ.ವಿ. ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ

ಮಾದರಿ ಪ್ರಶ್ಣೆಗಳು:- ಎರಡು ಅಂಕಗಳಿಗೆ ಸರ್‌ ವಿಲಿಯಂ ಜೋನ್ಸ್‌ ರಾಬರ್ಟ್‌ ಬ್ರೂಸ್‌ಫೂಟ್‌ ಉತ್ಖನನಗಳು ಹಿಮಾಲಯ ಪರ್ವತಗಳ ಮಹತ್ವ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಹಳೆ ಶಿಲಾಯುಗದ ಜನಜೀವನ ಮಧ್ಯ ಶಿಲಾಯುಗದ ಜನಜೀವನ ನವಶಿಲಾಯುಗದ ಜನಜೀವನ ಹರಪ್ಪಾ ಲಿಪಿ ಸಿಂಧೂ ನಗರ ಯೋಜನೆ ಮೊಹೆಂಜೊ-ದಾರೋದ ಈಜುಕೊಳ ಲೋಥಾಲ್‌ ತ್ರಿಪಿಠಕಗಳು ಜೈನಧರ್ಮದ ಪಂಥಗಳು ಸಲ್ಲೇಖನ ಪೇಷಾವರ ಅಥವಾ ಪುರುಷಪುರ ಗಾಂಧಾರ ಕಲೆ ಐದು ಅಂಕಗಳ ಮಾದರಿ ಪ್ರಶ್ನೆಗಳು:- ಸಿಂಧೂ ಜನರ ಧಾರ್ಮಿಕ ಜೀವನ ವಿದೇಶೀಯ ಬರವಣಿಗೆಗಳು ಶಾಸನಶಾಸ್ತ್ರ ನಾಣ್ಯಶಾಸ್ತ್ರ ಸಿಂಧೂ ನಾಗರೀಕತೆಯ ನಗರಯೋಜನೆ ಹರಪ್ಪಾ ನಾಗರೀಕತೆಯ ಉಗ್ರಾಣಗಳು ಬುದ್ಧನ ಬೋಧನೆಗಳು ಮಹಾವೀರನ ಬೋಧನೆಗಳು ಚಂದ್ರಗುಪ್ತ ಮೌರ್ಯ ಅರ್ಥಶಾಸ್ತ್ರ ಕನಿಷ್ಕ ಹತ್ತು ಅಂಕಗಳ ಮಾದರಿ ಪ್ರಶ್ನೆಗಳು: ಪ್ರಾಚೀನ ಭಾರತದ ಇತಿಹಾಸ ಪುನರ್‌ರಚನೆಯಲ್ಲಿ ಸಾಹಿತ್ಯಾಧಾರಗಳ ಮಹತ್ವವನ್ನು ವಿವರಿಸಿ ಪ್ರಾಚೀನ ಭಾರತದ ಇತಿಹಾಸ ಪುನರ್‌ರಚನೆಯಲ್ಲಿ ಪುರಾತತ್ವ ಆಧಾರಗಳ ಮಹತ್ವವನ್ನು ಚರ್ಚಿಸಿರಿ ಹಳೆಶಿಲಾಯುಗ ಮತ್ತು ನವಶಿಲಾಯುಗಗಳ ಜನಜೀವನದ ನಡುವಣದ ವ್ಯತ್ಯಾಸವನ್ನು ಚರ್ಚಿಸಿರಿ ಹರಪ್ಪಾ (ಸಿಂಧೂ) ನಾಗರೀಕತೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿರಿ ಬುದ್ಧನ ಜೀವನ ಮತ್ತು ಬೋಧನೆಗಳನ್ನು ವಿವರಿಸಿ ಜೈನ ಮತ್ತು ಬೌದ್ಧ ಧರ್ಮಗಳ ಪತನಕ್ಕೆ ಕಾರಣಗಳನ್ನು ಚರ್ಚಿಸಿರಿ ಅಶೋಕನ ಜೀವನ ಮತ್ತು ಸಾಧನೆಗಳನ್ನು ವಿವರಿಸಿ ಬೌದ್ಧ ಧರ್ಮದ ಪ್ರಚಾರಕ್ಕೆ ಅಶೋಕನ ಕೊಡುಗೆಗಳನ್ನು ಚ...

ಕೌಶಲ್ಯ ವರ್ಧನೆ ಪತ್ರಿಕೆ - Skill Enhancement Course (SEC) ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲೂ ಮಾಹಿತಿ - ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಪ್ರಥಮ ಚತುರ್ಮಾಸದ ವಿದ್ಯಾರ್ಥಿಗಳಿಗಾಗಿ

ಕರ್ನಾಟಕ ಸರ್ಕಾರ Government of Karnataka ಕಾಲೇಜು ಶಿಕ್ಷಣ ಇಲಾಖೆ Department of Collegiate Education ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ Shree Benakappa Shankrappa Simhasanad Government First Grade College ಗಜೇಂದ್ರಗಡ ೫೮೨-೧೧೪ – Gajendragad 582-114 ನೂತನ ಶಿಕ್ಷಣ ನೀತಿಯ ಅನುಸಾರ ನಿಗದಿಗೊಳಿಸಿದ ಪಠ್ಯಕ್ರಮ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನ್ವಯ {೨೦೨೧-೨೨ ರಿಂದ ಜಾರಿಗೊಳಿಸಿದೆ- } ಪ್ರಥಮ ಚತುರ್ಮಾಸದ ಕಲಾ ವಿಭಾಗದ ಪಠ್ಯಕ್ರಮ Syllabus of B. A. First Semester   ಕೌ.ವ.ಪ. ೦೧ – ಪ್ರವಾಸೀ ಮಾರ್ಗದರ್ಶನ SEC-01 Tour Guiding ಕೌಶಲ್ಯ ವರ್ಧನೆ ಪತ್ರಿಕೆ (೫೦ ಅಂಕಗಳಿಗೆ) Skill Enhancement Paper (SEC) for 50 Marks (-----------    -) ಪತ್ರಿಕೆಯ ಕಲಿಕಾ ಉದ್ದೇಶಗಳು - Course outcome: ವಿದ್ಯಾರ್ಥಿಗಳು ಪ್ರವಾಸೀ ಮಾರ್ಗದರ್ಶನದ ಕೌಶಲ್ಯಗಳನ್ನು ಕಲಿಯುವರು Students will learn skills in tour guiding. ಮಾರ್ಗದರ್ಶಕರು ಪ್ರವಾಸೋದ್ಯಮದಲ್ಲಿ ದುಡಿಯುವ ವೃತ್ತಿನಿರತರಾಗಿದ್ದು, ಅವರು ಪ್ರವಾಸಿಗರನ್ನು ತಮ್ಮ ಸುತ್ತಲಿನ ಪ್ರವಾಸೀತಾಣಗಳಲ್ಲಿ ಪ್ರವಾಸಿಗರನ್ನು ಮಾರ್ಗದರ್ಶಿಸುವರು. Guides are tourism pr...

ಎಷ್ಟು ಸುಲಭವೂ ಇತಿಹಾಸ!

ಗತಿಸಿದ ಘಟನೆಗಳೇ ಇತಿಹಾಸ ಕಾಲಕ್ಕೆ ತಕ್ಕಂತೆ ಬರೆವುದೇ ಪುನರ್‌ರಚನೆ ಬದಿಯ ಕಲ್ಲು ಆಗಲಾರದು ಆಧಾರ ಕೊರೆದು ಕೆತ್ತಿದರೆ ಅದುವೇ ಮೂಲಾಧಾರ ಅಗೆದು ಬಗೆದರೆ ಉತ್ಖನನ ಹುಡುಕಿ ತೆಗೆದರೆ ಸಂಶೋಧನ ಲಂಬ ಉತ್ಖನನವು ಆಳ-ಾಳಕೆ ಸಮತಲವು ಉದ್ದ-ಅಗಲಕೆ ಪಳೆಯುಳಿಕೆಗಳು ಅಲಿಖಿತ ಬರೆದುದೆಲ್ಲವೂ ಲಿಖಿತ ನಮ್ಮವರು ಬರೆದುದು ದೇಶೀಯ ಬಂದವರು ಬರೆದುದು ವಿದೇಶೀಯ ಎಷ್ಟು ಸುಲಭವೂ ನೋಡಿ ಇತಿಹಾಸ! ನೀವು ಕಲಿತರೆ ನಮಗದೇ ಸಂತಸ!   ದಿನಾಂಕ : ೧ ನವೆಂಬರ್‌, ೨೦೨೧ ಸಮಯ : ಬೆಳಿಗ್ಗೆ ೯.೧೫. ಸಂದರ್ಭ : ರಾಜ್ಯೋತ್ಸವದ ಸಲುವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ವರಚಿತ ಕವನ ವಾಚನ ಸಂದರ್ಭದಲ್ಲಿ ಭಾಷಣದ ವೇಳೆ ಉಪಯೋಗಿಸಲು ಬರೆದದ್ದು.