ಸಾಳುವ ಮನೆತನ 1485-1505 ಮತ್ತು ತುಳುವ ಮನೆತನದ ಆಡಳಿತ ಆರಂಭ
ಸಾಳುವ ಮನೆತನದ ಸಂಕ್ಷಿಪ್ತ ರಾಜಕೀಯ ಇತಿಹಾಸ ಈ ಮನೆತನದ ಮೂವರು ಅರಸರು ಆಳಿದರು. ಸ್ಥಾಪಕನಾದ ಸಾಳುವ ನರಸಿಂಹನು ಸಾಳುವ ಗುಂಡನ ಮಗ. ಸಾಳುವಾಭ್ಯುದಯಂ ಇವನ ಸಾಧನೆಗಳನ್ನು ತಿಳಿಸುತ್ತದೆ. ಇವನು ಚಂದ್ರಗಿರಿಯ ಮಾಂಡಲೀಕನಾಗಿದ್ದನು. ಸಮರ್ಥ ಸೇನಾನಿ. ಇಮ್ಮಡಿ ದೇವರಾಯನ ಮರಣಾನಂತರ ರಾಜಧಾನಿಯ ಘಟನೆಗಳ ಮೇಲೆ ನಿಗಾ ವಹಿಸಿದ್ದನು. ಮಲ್ಲಿಕಾರ್ಜುನನ ಕಾಲದಲ್ಲಿ ಗಜಪತಿಗಳು ಗೆದ್ದಿದ್ದ ಉದಯಗಿರಿ ಮತ್ತು ಕೊಂಡವೀಡುಗಳನ್ನು ಕ್ರಮವಾಗಿ ೧೪೬೯ ಮತ್ತು ೧೪೮೦ ರಲ್ಲಿ ಅವರಿಂದ ಗೆದ್ದುಕೊಂಡನು. ೧೪೮೧ ರಲ್ಲಿ ಕಂಚಿಯವರೆಗೆ ಮುನ್ನುಗ್ಗಿದ್ದ ಬಹಮನಿ ಸೈನ್ಯವನ್ನು ಕಂದಕೂರು ಬಳಿ ಸೋಲಿಸಿ ಹಿಂದಕ್ಕಟ್ಟಿದ್ದನು. ತನ್ನ ಸೇನಾನಿ ತುಳುವ ಈಶ್ವರನ ಮೂಲಕ ನಾಗಮಂಗಲ, ಬೆಂಗಳೂರು ಮತ್ತು ಶ್ರೀರಂಗಪಟ್ಟಣಗಳನ್ನು ಗೆದ್ದುಕೊಂಡನು. ಸಂಗಮರ ದುರ್ಬಲ ಅರಸು ವಿರೂಪಾಕ್ಷನ ಸಾವಿನ ನಂತರ ರಾಜಧಾನಿಯ ಮುತ್ತಿಗೆಗೆ ತುಳುವ ನರಸನಾಯಕನ ನೇತೃತ್ವದಲ್ಲಿ ಸೈನ್ಯ ಕಳುಹಿಸಿದನು. ಇದರಿಂದ ಪ್ರೌಢದೇವರಾಯ ರಾಜಧಾನಿಯಿಂದ ಪಲಾಯನ ಮಾಡಿದನು. ಮುಂದೆ ಸಾಳುವ ನರಸಿಂಹನು ಪಟ್ಟವೇರಿದನು. ನೇರ ಆಡಳಿತ: ೧೪೮೫-೯೧: ಆರು ವರ್ಷಗಳ ಆಡಳಿತ. ಸಂಧಿಗ್ದ ಪರಿಸ್ಥಿತಿಯಲ್ಲಿ ರಾಜ್ಯದ ರಕ್ಷಣೆ ಮಾಡಿದನು. ಇವನ ವಿರುದ್ಧ ವಿವಿಧ ಮಾಂಡಲೀಕರು ಬಂಡಾಯ ಹೂಡಿದರು. ೧೪೯೧ ರಲ್ಲಿ ಗಜಪತಿಗಳ ಕಪಿಲೇಂದ್ರನು ಉದಯಗಿರಿಯನ್ನು ಗೆದ್ದುಕೊಂಡನು. ಉಮ್ಮತ್ತೂರು, ಕಾರ್ಕಳದ ಸಂ...