Posts

ಇತಿಹಾಸಪೂರ್ವ ಕಾಲ ಅಥವಾ ಪ್ರಾಗೈತಿಹಾಸಿಕ ಕಾಲ (ಶಿಲಾಯುಗ ಸಂಸ್ಕೃತಿ)

ಇತಿಹಾಸಪೂರ್ವ ಕಾಲ ಅಥವಾ ಪ್ರಾಗೈತಿಹಾಸಿಕ ಕಾಲ.    ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಲ್ಲಿ ಎರಡು ಬಗೆಗಳಿವೆ. ಲಿಖಿತ ಮತ್ತು ಅಲಿಖಿತ. ಇತಿಹಾಸ ಪುನರ್‌ ರಚನೆಗೆ ಲಿಖಿತ ಆಧಾರಗಳು ಲಭ್ಯವಾಗುವ ನಂತರದ ಕಾಲವನ್ನು “ಐತಿಹಾಸಿಕ ಕಾಲ” ೆನ್ನುವರು. ಆದರೆ, ಇತಿಹಾಸದ ಪುನರ್‌ ರಚನೆಗೆ ಕೇವಲ ಅಲಿಖಿತ ಅಥವಾ ಪುರಾತತ್ವ ಆಧಾರಗಳು ಲಭ್ಯವಾಗುವ ಕಾಲವನ್ನು “ಇತಿಹಾಸಪೂರ್ವ ಕಾಲ, ಪ್ರಾಗೈತಿಹಾಸಿಕ ಕಾಲ ಅಥವಾ ಪ್ರಾಗ್ಚಾರಿತ್ರಿಕ ಕಾಲ” ಎನ್ನುವರು. ಸಾಮಾನ್ಯ ಶಕ ಪೂರ್ವ 3000 ವರ್ಷಗಳ ಹಿಂದಿನ ಕಾಲವನ್ನು ಇತಿಹಾಸಪೂರ್ವ ಕಾಲ ಎಂದು ಕರೆಯುವರು. ಈ ಕಾಲದ ಆರಂಭ, ವಿಕಾಸ & ಅಂತ್ಯಗಳು ಯಾವಾಗ ಆದವು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅಂದಿನ ಮಾನವನು ತನ್ನ ಜೀವನೋಪಾಯಕ್ಕಾಗಿ ಬಳಸುತ್ತಿದ್ದ ಶಿಲಾಯುಧಗಳು ಅತವಾ ಶಿಲಾ ಉಪಕರಣಗಳ ಕಾರಣ  ಈ ಕಾಲಘಟ್ಟವನ್ನು “ಶಿಲಾಯುಗ ಸಂಸ್ಕೃತಿಯ ಕಾಲ” ಎಂತಲೂ ಕರೆಯುವರು.    ಪ್ರಪಂಚದ ವಿವಿಧ ಭಾಗಗಳಲ್ಲಿ ಶಿಲಾಯುಗ ಕಾಲದ ನೆಲೆಗಳು ಪತ್ತೆಯಾಗಿರುವಂತೆ ಭಾರತದಲ್ಲಿಯೂ ಸಹಾ ಆ ಕಾಲದ ನೆಲೆಗಳು ಪತ್ತೆಯಾಗಿವೆ. ಭಾರತದಲ್ಲಿ ಪ್ರಾಗೈತಿಹಾಸಿಕ ಕಾಲದ ಆಧಾರಗಳು ಮತ್ತು ನೆಲೆಗಳ ಸಂಶೋಧನೆ ನಡೆಸಿದ ಕೆಲವು ಪ್ರಮುಖ ಸಂಶೋಧಕರು:- ರಾಬರ್ಟ್‌ ಬ್ರೂಸ್‌ ಫೂಟ್‌, ಭಾರತದ ಪ್ರಾಗೈತಿಹಾಸಿಕ ಪಿತಾಮಹಾ, ಮೆಡೋಸ್‌ ಟೇಲರ್‌, ಜಾನ್‌ ಮಾರ್ಷಲ್‌, ಡಾ. ದಯಾರಾಂ ಸಹಾನಿ, R.D ಬ್...

ಮೂರನೆ ಕರ್ನಾಟಿಕ್‌ ಯುದ್ಧ; ಕಾರಣಗಳು, ಘಟನೆಗಳು & ಪರಿಣಾಮಗಳು. ಆಂಗ್ಲರ ವಿಜಯಕ್ಕೆ ಕಾರಣಗಳು.

3 ನೆ ಕರ್ನಾಟಿಕ್‌ ಯುದ್ಧ 1758-63 ಕಾರಣಗಳು: ಮೂರನೆ ಕರ್ನಾಟಿಕ್‌ ಯುದ್ಧಕ್ಕೆ ಕಾರಣವಾದ ಪ್ರಮುಖ ಅಂಶಗಳು ಕೆಳಕಂಡಂತಿವೆ:- 1.      ಮೊದಲ & ಎರಡನೆ ಕರ್ನಾಟಿಕ್‌ ಯುದ್ಧದ ಪರಿಣಾಮಗಳು. 2.      ಯೂರೋಪಿನಲ್ಲಿ ಆರಂಭವಾದ ಸಪ್ತ ವಾರ್ಷಿಕ ಯುದ್ಧ 1756-63. 3.      ಬ್ರಿಟೀಷರ ರಾಜಕೀಯ & ಸೈನಿಕ ವಿಜಯಗಳು. ಘಟನೆಗಳು: ಈ ಯುದ್ಧದ ಪ್ರಮುಖ ಘಟನೆಗಳು ಇಂತಿವೆ:- 1.      ಫ್ರಾನ್ಸಿನಿಂದ ಬಲಿಷ್ಠ ಸೈನ್ಯದೊಂದಿಗೆ ಕೌಂಟ್‌ ಡಿ ಲ್ಯಾಲಿಯ ಆಗಮನ. 2.      ಅವನಿಂದ ಬ್ರಿಟೀಷರ ನೆಲೆ ಸೇಂಟ್‌ ಫೋರ್ಟ್‌ ಡೇವಿಡ್‌ ವಶ. 3.      ಮುಂದೆ ಮದ್ರಾಸ್‌ ವಶಪಡಿಸಿಕೊಳ್ಳಲು ಬುಸ್ಸಿಗೆ ಸೈನ್ಯ ಸಮೇತ ಬರಲು ಆದೇಶ. 4.      ಮನಸ್ಸಿಲ್ಲದ ಬುಸ್ಸಿ ಹೈದ್ರಾಬಾದ್‌ ನಿಂದ ಹೊರಟನು. 5.      ಮದ್ರಾಸ್‌ ಮೇಲಿನ ದಾಳಿಯನ್ನು ಬ್ರಿಟೀಷರು ಸಫಲವಾಗಿ ಹಿಮ್ಮೆಟ್ಟಿಸಿದರು. 6.      ಇತ್ತ ಕ್ಲೈವ್‌ ಕರ್ನಲ್‌ ಫೋರ್ಡ್‌ ನಿಗೆ ಉತ್ತರ ಸರ್ಕಾರಗಳನ್ನು ವಶಪಡಿಸಿಕೊಳ್ಳಲು ಆದೇಶ. 7.      ಉತ್ತರ ಸರ್ಕಾರದ ಮೇಲೆ ಫೋರ್ಡ್‌ ವಿಜಯ; ಸಲಾಬತ್‌ ಜಂಗ್ ಪಕ್ಷ ಬದಲಾವಣೆ. 8.   ...

ಎರಡನೆ ಕರ್ನಾಟಿಕ್‌ ಯುದ್ಧ, ಕಾರಣಗಳು, ಘಟನೆಗಳು & ಪರಿಣಾಮಗಳು; ಕ.ವಿ ವ್ಯಾಪ್ತಿಯ5ನೆ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ

ಎರಡನೆ ಕರ್ನಾಟಿಕ್‌ ಯುದ್ಧ ೧೭೪೯ – ೫೪    ಮೊದಲನೆ ಕರ್ನಾಟಿಕ್‌ ಯುದ್ಧವು ಕೊನೆಗೊಂಡರೂ ಆಂಗ್ಲ & ಬ್ರಿಟೀಷರ ನಡುವಣ ಸಂಘರ್ಷಗಳು ಮುಂದಿನ ಎರಡು ಕರ್ನಾಟಿಕ್‌ ಯುದ್ಧಗಳಿಗೆ ತಳಹದಿಯನ್ನು ಒದಗಿಸಿದವು. ಯುದ್ಧದ ಕಾರಣಗಳು:- ಅ. ವ್ಯಾಪಾರ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳು. ಆ. ಉತ್ತರಾಧಿಕಾರದ ಪ್ರಶ್ನೆ: ೧೭೪೮ ರಲ್ಲಿ ಹೈದ್ರಾಬಾದ್ ನಿಜಾಮ ಆಸಫ್ ಜಾ ಮರಣ; ನಿಜಾಮನ ಮಗ ನಾಸೀರುದ್ದೀನ್ ಜಂಗ್ ಮತ್ತು ಮೊಮ್ಮೊಗ ಮುಜಾಫರ್ ಜಂಗ್  ನಡುವೆ ಉತ್ತರಾಧಿಕಾರದ ಪ್ರಶ್ನೆ ಉದ್ಭವಿಸಿತು. ಇ. ಕರ್ನಾಟಿಕ್ನಲ್ಲಿ ರಾಜಕೀಯ ಸ್ಥಿತಿ ಬದಲಾವಣೆ: ೧೭೪೮ರ ವೇಳೆಗೆ ಮರಾಠರ ಸೆರೆಯಲ್ಲಿದ್ದ ಚಂದಾಸಾಏಬ್ ಬಿಡುಗಡೆ ಹೊಂದಿ ಆರ್ಕಾಟಿಗೆ ಮರಳಿದ. ಅವನು ಕರ್ನಾಟಿಕ್ ಪ್ರಾಂತ್ಯದ ನವಾಬ ಅನ್ವರುದ್ದೀನನ ವಿರುದ್ಧ ಫ್ರೆಂಚರ ನೆರವು ಕೇಳಿದ. ಘಟನೆಗಳು:- • ಡೂಪ್ಲೆ ಹೈದರಾಬಾದಿನಲ್ಲಿ  ಮುಜಾಫರ್ ಜಂಗನಿಗೂ ಮತ್ತು ಆರ್ಕಾಟಿನಲ್ಲಿ ಚಂದಾಸಾಹೇಬನಿಗೂ  ಬೆಂಬಲ ನೀಡಿ  ಸೈನ್ಯದ ನೆರವು ಘೋಷಿಸಿದ. ಪ್ರತಿಯಾಗಿ ಬ್ರಿಟೀಷರು ಹೈದರಾಬಾದಿನಲ್ಲಿ ನಾಸಿರ್‌ ಜಂಗನಿಗೂ ಮತ್ತು ಆರ್ಕಾಟಿನಲ್ಲಿ ಅನ್ವರುದ್ದೀನನಿಗೂ ಬೆಂಬಲ ಘೋಷಿಸಿದರು. ಿದರಿಂದ ಎರಡೂ ಪಕ್ಷಗಳ ನಡುವೆ ಯುದ್ಧದ ಅನಿವಾರ್ಯತೆ ಉಂಟಾಯಿತು. ಫ್ರೆಂಚರ ಬೆಂಬಲಿತ ಚಂದಾಸಾಹೇಬ 1749 ರಲ್ಲಿ ಆರ್ಕಾಟ್‌ ಮೇಲೆ ಸೈನಿಕ ದಾಳಿ ಮಾಡಿದ. ಅಂಬೋರ್ ಕದನದಲ್ಲಿ ಕರ್ನಾಟಿಕ್‌ ನವಾಬನಾಗಿದ್ದ ...

ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ

ಭಾರತದ ಭೌಗೋಳಿಕ ಲಕ್ಷಣಗಳು . Geography of India. ಭಾರತದ ಇತಿಹಾಸದ ಮೇಲೆ ಅದರ ಪ್ರಭಾವ .    ಯಾವುದೇ ದೇಶದ ಇತಿಹಾಸವು ಆಯಾ ದೇಶದ ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ . ಭೌಗೋಳಿಕ ಅಂಶಗಳು ಮಾನವನ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ . ಭೌಗೋಳಿಕ ಅಂಶಗಳು ಪರ್ವತಗಳು , ನದಿಗಳು , ಬೆಟ್ಟ - ಗುಡ್ಡಗಳು , ಅರಣ್ಯಗಳು , ಹವಾಗುಣ , ಭೂಗುಣ ಇತ್ಯಾದಿ . ಇವುಗಳು ಮನುಷ್ಯನ ಮೇಲೆ ತಮ್ಮ ಪ್ರಭಾವ ಬೀರುವುದೇಕೆ ? ಮಾನವ ಪ್ರಕೃತಿಯ ಶಿಶು ; ಕಾರಣ ಅವನ ಮೇಲೆ ಪ್ರಕೃತಿಯ ಪ್ರಭಾವ ಇದ್ದೇ ಇರುತ್ತದೆ . ಅಂತೆಯೇ , ಇತಿಹಾಸದ ಹುಟ್ಟು , ಬೆಳವಣಿಗೆ ಮತ್ತು ನಿರಂತರತೆಗಳು ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತವೆ . ಜನರ ರಾಜಕೀಯ , ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ಅಂಶಗಳಿಂದ ಪ್ರಭಾವಿತ . ಎಲ್ಲಾ ನಾಗರೀಕತೆಗಳು ನದಿಗಳ ತೀರಗಳಲ್ಲಿಯೇ ಹುಟ್ಟಿ ಬೆಳೆದಿವೆ . ಉದಾ :- ಈಜಿಪ್ಟ್ ನಾಗರೀಕತೆ . ಹರಪ್ಪ ನಾಗರೀಕತೆ . ಇಂಗ್ಲೆಂಡ್ ಸುದೀರ್ಘ ಸಮುದ್ರ ತೀರ ಹೊಂದಿರುವ ಕಾರಣ ನೌಕಾಯಾನದಲ್ಲಿ ಶ್ರೇಷ್ಠತೆ ಸಾಧಿಸಿತು ; ಜಗತ್ತಿನ ಮೇಲೆ ಒಡೆತನ ಸಾಧಿಸಿತು . ಭೂಗೋಳದ ಅಧ್ಯಯನ ಏಕೆ? ಇತಿಹಾಸವು ಭೂಗೋಳದ ನಿರ್ಮಾಣ . ಭೂಗೋಳವನ್ನು ತಿಳಿಯದೇ ಅದರ ಇತಿಹಾಸ ಅಧ್ಯಯನ ಅಪೂರ್ಣ ; ಅಸಾಧ್ಯ . ಭೂಗೋಳವಿಲ್ಲದೇ ಇತ...

ಅಲ್ಲಾವುದ್ದೀನ್‌ ಖಿಲ್ಜಿಯ ದಿಗ್ವಿಜಯಗಳು & ಸಾಮ್ರಾಜ್ಯ ವಿಸ್ತರಣೆ, 3ನೆ ಸೆಮಿಸ್ಟರ್‌ ಗಾಗಿ, ಕ.ವಿ, ಧಾರವಾಡ

ಅಲ್ಲಾವುದ್ದೀನನ ದಿಗ್ವಿಜಯಗಳು ಅಥವಾ ಸಾಮ್ರಾಜ್ಯ ವಿಸ್ತರಣೆ ಸಾಮ್ರಾಜ್ಯ ವಿಸ್ತರಣೆಯನ್ನು ಎರಡು ಹಂತಗಳಲ್ಲಿ ಅಧ್ಯಯನ ಮಾಡಬಹುದು . 1.      ಉತ್ತರ ಭಾರತ ಮತ್ತು 2. ದಕ್ಷಿಣ ಭಾರತದ ಮೇಲಿನ ವಿಜಯಗಳು . ಉತ್ತರ ಭಾರತದ ಯುದ್ಧಗಳು ಗುಜರಾತ್ ೧೨೯೯ :- ಗುಜರಾತ್ ಶ್ರೀಮಂತ ಪ್ರಾಂತ್ಯ. ರಾಜಾ ಕರ್ಣದೇವನ ಆಳ್ವಿಕೆ. ನುಸ್ರತ್ ಕಾನ್ ನೇತೃತ್ವದಲ್ಲಿ ದಾಳಿ. ಕರ್ಣದೇವನ ಪ್ರಬಲ ವಿರೋಧ, ಆದರೂ ಖಿಲ್ಜಿ ಸೈನ್ಯದ ಗೆಲುವು. ಕರ್ಣದೇವ ಪಲಾಯನ – ದೇವಗಿರಿಗೆ – ತನ್ನ ಮಗಳು ದೇವಲ ದೇವಿಯೊಂದಿಗೆ. ಕರ್ಣನ ರಾಣಿ ಕಮಲಾದೇವಿ ಸೆರೆ, ದೆಹಲಿಗೆ ರವಾನೆ. ಮುಂದೆ ಅಲ್ಲಾನ ರಾಣಿ. ‌ ಗುಜರಾತ್ ಲೂಟಿ , ಅಪಾರ ಸಂಪತ್ತು ವಶ . ನುಸ್ರತ್ ಖಾನ್ ಗುಜರಾತಿನ ಬಂದರು ಕ್ಯಾಂಬೆವರೆಗೆ ಮುನ್ನುಗ್ಗಿದ . ಇಲ್ಲಿಯೇ ’ ಕಫೂರ್ ” ಎಂಬ ಗುಲಾಮ ನಪುಂಸಕನ ಖರೀದಿ . ೧೦೦೦ ದಿನಾರಗಳಿಗೆ . ಮುಂದೆ ಖಿಲ್ಜಿಯ ಪರಮಾಪ್ತ ಮತ್ತು ದಕ್ಷಿಣದ ದಂಡಯಾತ್ರೆಗಳ ನಾಯಕ . ರಣಥಂಬೋರ್ ೧೩೦೧ :- ರಣಥಂಬೋ‌ರ್ ಬಲಿಷ್ಠ ಕೋಟೆ. ರಾಣಾ ಹಮ್ಮೀರದೇವ ಇದರ ರಾಜ. ನುಸ್ರತ್ ನೇತೃತ್ವದಲ್ಲಿ ಮುತ್ತಿಗೆ. ಹಮ್ಮೀರದೇವನ ಪ್ರಬಲ ವಿರೋಧ. ನುಸ್ರತ್ ಖಾನ್ ಕಲ್ಲಿನ ಏಟು ತಿಂದು ಮರಣ. ಅಲ್ಲಾ ತಾನೇ ನೇತೃತ್ವ ವಹಿಸಿಕೊಂಡ. ಕುತಂತ್ರ – ರಣಮಲ್ಲನೆಂಬ ದ್ರೋಹಿಯ ಸಹಾಯದಿಂದ ಕೋಟೆ ಪ್ರವೇಶ. ಕೋಟೆಯ ವಶ – ರಣಮಲ್ಲನ ಕೊಲೆ. ಅಧಿಕಾರಿಯಾಗಿ ಉಲುಗ್ ಖಾನನ...

ಇತಿಹಾಸದೊಂದಿಗೆ ಇತರೆ ಸಮಾಜ ವಿಜ್ಞಾನಗಳು & ಸಹಾಯಕ ಶಾಸ್ತ್ರಗಳ ಸಂಬಂಧಗಳು

ಇತಿಹಾಸದೊಂದಿಗೆ ಇತರೆ ಸಮಾಜಶಾಸ್ತ್ರಗಳು & ಸಹಾಯಕ ಶಿಸ್ತುಗಳ ಸಂಬಂಧ    ಇತಿಹಾಸವು ಇಂದು ಸ್ವತಂತ್ರವಾದ ಅಧ್ಯಯನದ ವಿಷಯವಾದರೂ ಅದಕ್ಕೆ ವಿವಿಧ ಸಾಮಾಜಿಕ ವಿಜ್ಞಾನಗಳೊಂದಿಗೆ ಪೂರಕ ಸಂಬಂಧವಿರುವುದು ಕಂಡುಬರುತ್ತದೆ. ಅಲ್ಲದೇ ಇತಿಹಾಸ ಅಧ್ಯಯನಕ್ಕೆ ಮತ್ತು ಅದರ ಪುನರ್‌ ರಚನೆಗೆ ಇತರೆ ಕೆಲವು ಸಹಾಯಕ ಶಿಸ್ತುಗಳು ಅಂದರೆ ಶಾಸ್ತ್ರಗಳ ಜ್ಞಾನ ಅಗತ್ಯ. ಕಾರಣ ಇತಿಹಾಸದೊಂದಿಗೆ ಮಾನವಿಕ ಅಥವಾ ಸಾಮಾಜಿಕ ವಿಜ್ಞಾನಗಳು ಮತ್ತು ಸಹಾಯಕ ಶಿಸ್ತುಗಳು ಅಥವಾ ಶಾಸ್ತ್ರಗಳ ಅಧ್ಯಯನ ಅಗತ್ಯವೆನಿಸಿದೆ. • Archeology , the study of human activity through the recovery and analysis of material culture. ಇತಿಹಾಸದ ಪುನರ ರಚನೆಗೆ ಅಗತ್ಯವಾದ ಕೆಲವು ಸಹಾಯಕ ಶಿಸ್ತುಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಕೊಡಲಾಗಿದೆ. ಪುರಾತತ್ವ ಶಾಸ್ತ್ರ:- ಪಳೆಯುಳಿಕೆಗಳ ಸಂಗ್ರಹಣೆ ಮತ್ತು ಅಧ್ಯಯನದ ಮೂಲಕ ಆದಿಮಾನವನ ಚಟುವಟಿಕೆಗಳನ್ನು ಅಧ್ಯಯನ ಮಾಡುವುದು. Chronology , the study of the sequence of past events . ಕಾಲಗಣನಾಶಾಸ್ತ್ರ:- ಐತಿಹಾಸಿಕ ಘಟನೆಗಳ ಕಾಲಾನುಕ್ರಮಣಿಕೆಯ ಅಧ್ಯಯನ. Epigraphy , the study of ancient inscriptions ಶಾಸನಶಾಸ್ತ್ರ:- ಪ್ರಾಚೀನ ಶಾಸನಗಳ ಅಧ್ಯಯನ. Numismatics , the study of coins ನಾಣ್ಯಶಾಸ್ತ್ರ:- ನಾಣ್ಯಗಳ ವ್ಯವಸ್ಥಿತ ಅಧ್ಯಯನ. Paleography , the st...